ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

31ಕ್ಕೆ ಕಾಯಂ ಪೀಠದ ಉದ್ಘಾಟನೆ

Lingaraj Badiger
Updated On : 29 Aug 2013, 11:57 am

ರಾಯಚೂರು: ಗುಲ್ಬರ್ಗ ನಗರದಲ್ಲಿ ಹೈಕೋರ್ಟ್‌ನ ಕಾಯಂ ಪೀಠದ ಉದ್ಘಾಟನೆ ಸಮಾರಂಭವನ್ನು ಆ.31ರಂದು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 11.30ಕ್ಕೆ ಹೈಕೋರ್ಟ್ ಕ್ಯಾಂಪಸ್ ಆವರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ ಉದ್ಘಾಟಿಸಲಿದ್ದಾರೆ. ರಾಜ್ಯದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಡಿ.ಎಚ್. ವಾಘೆಲಾ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಹೈಕೋರ್ಟಿನ ಬಿಲ್ಡಿಂಗ್ ಕಮಿಟಿ ಚೇರ್ಮನ್ ಹಾಗೂ ನ್ಯಾಯಾಧೀಶ ಎನ್.ಕೆ. ಪಾಟೀಲ್, ಹಾಗೂ ನ್ಯಾಯಾಧೀಶರಾದ ಕೆ.ಭಕ್ತವತ್ಸಲ್, ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಕರ್ನಾಟಕದ ಅಡ್ವೋಕೆಟ್ ಜನರಲ್ ರವಿವರ್ಮಕುಮಾರ, ಬಾರ್ ಕೌನ್ಸಿಲ್ ಚೇರ್ಮನ್ ಮುನಿಯಪ್ಪ, ಗುಲ್ಬರ್ಗದ ಬಾರ್ ಕೌನ್ಸಿಲ್ ಅಧ್ಯಕ್ಷ ಡಿ.ಕೆ. ಯುಸೂಫ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ರಜಿಸ್ಟ್ರಾರ್ ಆರ್.ಬಿ. ಬೂದಿಹಾಳ ಹಾಗೂ ಅಡಿಶನಲ್ ರಿಜಿಸ್ಟಾರ್ ಜನರಲ್ ರಾಜಮೋಹನ್ ಶ್ರೀವಾತ್ಸವ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement