ಇಂದಿನಿಂದ ಪುಸ್ತಕ ಮಾರಾಟ
ರಾಯಚೂರು: ಭಾರತ ಸರ್ಕಾರದ ವಾರ್ತಾ ಶಾಖೆ, ಜಿಲ್ಲಾಡಳಿತ, ಜಿಪಂ ರಾಯಚೂರು ಇವರ ಸಹಯೋಗದಲ್ಲಿ ಆ.29ರಿಂದ 31ರವರೆಗೆ ನಗರದ ರಂಗಮಂದಿರದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳಿಂದ ಪುಸ್ತಕ ಪ್ರದರ್ಶನ ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಿದ್ದು, ಡಾ. ಶಿವರಾಮ ಕಾರಂತ, ಅನಕೃ ಸಾಹಿತ್ಯ ಸಂಪುಟ, ಶ್ರೀರಂಗ ಸಾರಸ್ವತ, ಡಾ. ಚನ್ನವೀರ ಕಣವಿ ಸಮಗ್ರ ಸಾಹಿತ್ಯ, ಡಾ. ಜಿ. ಎಸ್. ಶಿವರುದ್ರಪ್ಪ ಸಮಗ್ರ ಸಾಹಿತ್ಯ, ಪ್ರೊ. ಎಲ್.ಎಸ್. ಶೇಷಗಿರಿರಾವ್ ಸಮಗ್ರ ಸಾಹಿತ್ಯ, ವಾಲ್ಮೀಕಿ ರಾಮಾಯಣ, ವಾಲ್ಮೀಕಿ ದರ್ಶನಂ, ಎಂ. ಗೋಪಾಲ ಕೃಷ್ಣ ಅಡಿಗರ ಸಮಗ್ರ ಕಾವ್ಯ, ಡಿ.ಎಸ್. ಕರ್ಕಿ ಸಮಗ್ರ ಸಾಹಿತ್ಯ, ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ, ಸಂಪುಟ ಹಾಗೂ ಇನ್ನಿತರ ಹೆಸರಾಂತ ಸಾಹಿತಿಗಳ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.
ಶೇ. 15ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿದ್ದು, ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು, ಸಾರ್ವಜನಿಕರು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮಂಡಳಿಯವರು ಈ ಪುಸ್ತಕಗಳ ಖರೀದಿಗೆ ಹೆಚ್ಚಿನ ಆಸಕ್ತಿ ವಹಿಸಿ ಇಲಾಖೆಯಿಂದ ನೀಡುತ್ತಿರುವ ರಿಯಾಯತಿ ದರದ ಸದುಪಯೊಗ ಪಡೆಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ತಿಳಿಸಿದ್ದಾರೆ.