ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಂಡೋಸಲ್ಫಾನ್ ಮಾರಾಟ: ದಾಳಿ

Lingaraj Badiger
Updated On : 29 Aug 2013, 11:52 am

ಸಿಂಧನೂರು: ನಗರದ ಸೂರ್ಯ ಆಗ್ರೋಸ್‌ನಲ್ಲಿ ನಿಷೇಧಿತ ಎಂಡೋಸಲ್ಫಾನ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿ ಸರಸ್ವತಿ ನೇತೃತ್ವದ ತಂಡದವರು ಬುಧವಾರ ದಾಳಿ ನಡೆಸಿದರು.
ಕಳೆದ ವಾರವಷ್ಟೇ ರೈತರೊಬ್ಬರು ಕ್ರಿಮಿನಾಶಕವನ್ನು ಕೊಂಡೊಯ್ದಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದ ಕೃಷಿ ಅಧಿಕಾರಿಗಳು ಎಲ್ಲ ಮಾಹಿತಿಯನ್ನು ಕಲೆಹಾಕಿ ಬುಧವಾರ ಏಕಾಏಕಿ ದಾಳಿಗೆ ಮುಂದಾದರು.
ಎಂಡೋಸಲ್ಫಾನ್ ಮಾರಾಟ ಕುರಿತಂತೆ ದಾಳಿ ಬಗ್ಗೆ ಮೊದಲೇ ತಿಳಿದ ಅಂಗಡಿ ಮಾಲೀಕರು ಎಚ್ಚೆತ್ತುಕೊಂಡಂತೆ ಕಂಡುಬಂತು. ಹೀಗಾಗಿ ಯಾವುದೇ ರೀತಿಯ ನಿಷೇಧಿತ ಕ್ರಿಮಿನಾಶಕ ಕಂಡು ಬರಲಿಲ್ಲ. ಅಂಗಡಿ ಪೂರ್ತಿ ಜಾಲಾಡಿದರೂ ಸಿಗದಿದ್ದಾಗ ಕೊನೆಗೆ ಆಗ್ರೋಸ್ ಪರವಾನಗಿ ರದ್ದುಪಡಿಸುವಂತೆ ಪತ್ರ ಬರೆಯಲಾಗುವುದು ಎಂದು ಮೇಲಾಧಿಕಾರಿಗಳು ತಿಳಿಸಿದರು.
ಕಠಿಣ ಕ್ರಮ: ನಂತರ ಮಾತನಾಡಿದ ಎಡಿಎ ಸರಸ್ವತಿ, ಅಂಗಡಿಯಲ್ಲಿ ಕಡ್ಡಾಯವಾಗಿ ದರಪಟ್ಟಿ ಹಾಕಬೇಕು. ರೈತರು ಕೇಳುವ ಮುನ್ನ ರಸಾಯನಿಕಗಳ ಬಿಲ್ ನೀಡಬೇಕು. ಎಂಡೋಸಲ್ಫಾನ್ ಮಾರಾಟಕ್ಕೆ ಸುಪ್ರೀಂಕೋರ್ಟ್ ನಿಷೇಧವಿದ್ದರೂ ನಿಯಮ ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತಂತೆ ಎಲ್ಲ ಅಂಗಡಿಗಳಿಗೆ ನಿರ್ದೇಶನ ನೀಡಿದ್ದರೂ ಜನರ ಜೀವಕ್ಕೆ ಮಾರಕವಾದ ಕ್ರಿಮಿನಾಶಕ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ತಾಲೂಕಿನಾದ್ಯಂತ ಎಲ್ಲ ಅಂಗಡಿಗಳನ್ನು ಪರಿಶೀಲಿಸಲಾಗುವುದು. ಇಂತಹ ಪ್ರಕರಣಗಳು ಕಂಡುಬಂದರೆ ಅಂಥವರ ಬಂಧನ ಖಚಿತ ಎಂದು ಎಚ್ಚರಿಸಿದರು.
ಸದ್ಯ ನಿಷೇಧಿತ ಕ್ರಿಮಿನಾಶಕ ಸಿಕ್ಕಿರುವ ಸೂರ್ಯ ಆಗ್ರೋಸ್‌ನಲ್ಲಿ ರೈತರು ಯಾವುದೇ ಕಾರಣಕ್ಕೂ ಕ್ರಿಮಿನಾಶಕ ಖರೀದಿಸಬಾರದು. ಇಂದಿನಿಂದಲೇ ರೈತರು ಎಚ್ಚೆತ್ತುಕೊಳ್ಳಬೇಕು ಎಂದರು. ರೈತ ಮುಖಂಡ ಎಚ್.ಎನ್.ಬಡಿಗೇರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement