ಚನ್ನಬಸವೇಶ್ವರ ಸೌಹಾರ್ದ ಸಹಕಾರಿಗೆ 9.80 ಲಕ್ಷ ಲಾಭ
ಸಿಂಧನೂರು: ನಗರದ ಸಾಯಿ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ 3ನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತು.
ಸಹಕಾರಿ ಅಧ್ಯಕ್ಷ ಎಂ. ಲೋಕನಗೌಡ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು ಅತಿ ಕಡಿಮೆ ಅವಧಿಯಲ್ಲಿ 9.80 ಲಕ್ಷ ಲಾಭ ಗಳಿಸಿದೆ. ಈ ವರ್ಷದಲ್ಲಿ ಸಹಕಾರಿಯು ತನ್ನ ಲಾಭಾಂಶದಲ್ಲಿನ ಶೇ.14ರಷ್ಟು ಸದಸ್ಯರಿಗೆ ಹಂಚಲು ಕ್ರಮ ತೆಗೆದುಕೊಂಡಿರುವ ಬಗ್ಗೆ ಶ್ಲಾಘಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಬಸವರಾಜ ಅವರು ಜಮಾ- ಖರ್ಚು, ಲಾಭ- ಹಾನಿ ಮತ್ತು ಅಢಾವೆ ಪತ್ರಿಕೆಯನ್ನು ಓದಿದರು. ಸಹಾಯಕ ವ್ಯವಸ್ಥಾಪಕ ಎನ್.ಬಸವರಾಜ ಸಹಕಾರಿಯ ದ್ವಿತೀಯ ವಾರ್ಷಿಕ ಮಹಾಸಭೆಯ ಗೊತ್ತುವಳಿಗಳನ್ನು ಮಂಡಿಸಿದರು.
ಸಹಕಾರಕ್ಕೆ ಮನವಿ: ನಿರ್ದೇಶಕ ಎಚ್.ಕಲ್ಯಾಣಪ್ಪ ಸಹಕಾರಿ ನಡೆದು ಬಂದ ಪ್ರಗತಿ ವರದಿ ಮಂಡಿಸಿದರು. 12- 13ನೇ ಸಾಲಿನ 9.80 ಲಕ್ಷ ನಿವ್ವಳ ಲಾಭ ಗಳಿಸಿದ್ದನ್ನು ಸಭೆಯ ಗಮನಕ್ಕೆ ತಂದರು. ಮುಂದೆಯೂ ಸದಸ್ಯರ ಸಹಕಾರ ಕೋರುತ್ತಾ ಸರ್ವ ಸದಸ್ಯರು ತಮ್ಮ ಹಣವನ್ನು ತೊಡಗಿಸಿ ಹೆಚ್ಚಿನ ಅಭಿವೃದ್ಧಿಗೆ ಮನವಿ ಮಾಡಿದರು.
ಚಾರ್ಟರ್ಡ್ ಅಕೌಂಟೆಂಟ್ ನಾಗನಗೌಡ ಕೆ. ಮಾತನಾಡಿದರು. ಅನ್ನಪೂರ್ಣ ಹೇಮವಾಡಿಗಿ ನಿರೂಪಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.