ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತುರ್ತು ಕಾರ್ಯ: ಸೆ. 3,4ಕ್ಕೆ ಕುಡಿವ ನೀರಿನ ವ್ಯತ್ಯಯ

Lingaraj Badiger
Updated On : 30 Aug 2013, 11:20 am

ರಾಯಚೂರು: ನಗರದ ಕೃಷ್ಣಾ ನದಿಯ ಎರಡನೇ ಹಂತದ ಕುಡಿಯುವ ನೀರಿನ ಸರಬರಾಜು ಘಟಕದಲ್ಲಿ ತುರ್ತು ಕೆಲಸದ ನಿಮಿತ್ತ ಸೆ.3 ಮತ್ತು 4ರಂದು ನಗರದ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದಿಲ್ಲ ಎಂದು ನಗರಸಭೆ ತಿಳಿಸಿದೆ.
ಈ ಕುರಿತು ಪೌರಾಯುಕ್ತರು ಪ್ರಕಟಣೆ ನೀಡಿ, ಯರಮರಸ್, ಯರಮರಸ್ ಕ್ಯಾಂಪ್, ಎಲ್‌ಬಿಎಸ್ ನಗರ, ಜಾರಿಗಟ್ಟ ಟ್ಯಾಂಕ್, ನೀರಭಾವಿ ಕುಂಟಾ, ಅರಬ್ ಮೊಹಲ್ಲಾ, ಅಂದ್ರೂನ್ ಖಿಲ್ಲಾ, ಬೇರೂನ್ ಖಿಲ್ಲಾ, ಮಡ್ಡಿಪೇಟೆ, ದೇವಿನಗರ, ಸತ್ಯನಾಥ ಕಾಲನಿ, ತಿಮ್ಮಾಪೂರಪೇಟೆ, ಬ್ರೇಸ್ತವಾರಪೇಟೆ, ಹರಿಜನವಾಡ, ವಿದ್ಯಾನಗರ, ಮಾಣಿಕಪ್ರಭು ಟ್ಯಾಂಕ್, ಕೋಟ್ ತಲಾರ, ಸಿಯಾತಲಾಬ್, ಸಾವಿತ್ರಿ ಕಾಲನಿ, ನಿಜಲಿಂಗಪ್ಪ ಕಾಲನಿ, ಡ್ಯಾಡಿ ಕಾಲೋನಿ, ಮಂಗಳವಾರಪೇಟೆ, ಗಂಜ್ ಏರಿಯಾ, ಪಾರಸವಾಟಿಕಾ ಏರಿಯಾ, ನೇತಾಜಿ ನಗರ, ಅಸ್ಕಿಹಾಳ ಗ್ರಾಮ ಮತ್ತು ಯಕ್ಲಾಸಪುರ ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement