ಹಿಂದೂ ಜನಜಾಗೃತಿ ಸಮಿತಿ ಮನವಿ
ಸಿಂಧನೂರು: ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿ ನಿಷೇಧಕ್ಕೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಮಿತಿಯ ಸಂಚಾಲಕ ಮಧ್ವರಾಜಾಚಾರ್ಯ ಮಾತನಾಡಿ, ಬೆಂಗಳೂರಿನಲ್ಲಿ ಅ.25 ರಂದು ಯೋಗೀಶ್ ಮಾಸ್ಟರ್ ರಚಿಸಿದ “vÚßMw’ ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿಯು ಬಿಡುಗಡೆಯಾಗಿದೆ. ಇದರಲ್ಲಿ ಗಣೇಶನನ್ನು ರೌಡಿ, ಕ್ರೂರಿ, ಹಿಂದುಳಿದ, ಹೀನ ಜಾತಿಯ ಶೂದ್ರರ, ಉಚ್ಚಿಷ್ಟ ದೇವತೆ ಎಂದು ವಿಕೃತವಾಗಿ ಚಿತ್ರಿಸಿ ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಈ ಕಾದಂಬರಿಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಹಿಂದೆಯೂ ಗಣೇಶ ಚತುರ್ಥಿ ಸಂದರ್ಭದಲ್ಲಿ ಡಾ. ಝಾಕೀರ ನಾಯ್ಕ ಗಣೇಶನಿಗೆ ಅಪಮಾನ ಮಾಡಿ ಗಣೇಶ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದರು. ಗಣೇಶನನ್ನು ಪ್ರಥಮ ಪೂಜಕ, ವಿದ್ಯೆ, ಬುದ್ದಿ ಮತ್ತು ಸಿದ್ದಿ ದೇವತೆಯೆಂದು ಕೊಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ಢುಂಢಿ ಕಾದಂಬರಿಯಲ್ಲಿ ಗಣೇಶನನ್ನು ಅತ್ಯಂತ ಕೀಳು ಮಟ್ಟದಲ್ಲಿ ಚಿತ್ರಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಘೋರ ಅಪರಾಧವಾಗಿದೆ. ಹಾಗಾಗಿ ಸರ್ಕಾರ ಲೇಖಕ, ಪ್ರಕಾಶಕರ ಮೇಲೆ ಅಪರಾಧವನ್ನು ದಾಖಲಿಸಿ, ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿಯ ಸದಸ್ಯರಾದ ಶ್ರೀಶೈಲ ಪತ್ತಾರ, ಹನುಮೇಶ ವಾಲೇಕಾರ, ತಿಮ್ಮಣ್ಣ ಯಾದವ, ವೆಂಕಟೇಶ ಕಟ್ಟಿಮನಿ, ಶ್ರೀನಿವಾಸ ಮೋದಿಕೇರ, ಮಹಾದೇವ ನಾಯಕ, ಬಸವರಾಜ ಹರಸೂರು, ಎಮ್.ಸಿ. ಸೀತಮ್ಮ, ವಾಸುದೇವ ಶೆಟ್ಟಿ, ಕೆ. ಬಾಳಪ್ಪ, ಜಿ.ಬಿ. ಅಮರೇಗೌಡ ಸಿಂಗಾಪುರ, ಅವಿನಾಶ ದೇಶಪಾಂಡೆ, ಅರವಿಂದ ಬಾಂಡಗೆ, ನಾಗೇಶ ಜಾಲಗಾರ, ಸಾಯಿನಾಥ ಭಟ್ಟರು, ವಿಶ್ವನಾಥ ವಕೀಲರು ಮತ್ತಿತರರು ಇದ್ದರು.