ನಗರದಲ್ಲಿ ಪುಟ್ಟಿ ಜಾತ್ರೆ ಸಂಭ್ರಮ
ಕನ್ನಡಪ್ರಭ ವಾರ್ತೆ ರಾಯಚೂರು ಆ.30
ನಗರದಲ್ಲಿ ಮುನ್ನೂರು ಕಾಪು ಸಮಾಜದಿಂದ ಪುಟ್ಟಿ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎ.ಪಾಪರೆಡ್ಡಿ ಮಾತನಾಡಿ, ಮುನ್ನೂರು ಕಾಪು ಸಮಾಜ ಲಕ್ಷ್ಮಮ್ಮ ದೇವಿ ಕೃಪೆಯಿಂದ ರೈತಾಪಿ ವರ್ಗವಾದ ಮುನ್ನೂರು ಕಾಪು ಸಮಾಜ ಬಾಂಧವರು ಪುಟ್ಟಿ ಜಾತ್ರೆ ಅಂಗವಾಗಿ ಮಹಿಳೆಯರು ಸಿಹಿ ತಿನಿಸುಗಳ ಪುಟ್ಟಿಗಳನ್ನು ತಂದು ಮುನ್ನೂರುವಾಡಿಯ ಲಕ್ಷ್ಮಮ್ಮ ದೇವಸ್ಥಾನದಿಂದ ದೇವಿಯನ್ನು ತೊಟ್ಟಿಲಲ್ಲಿ ಪ್ರತಿಷ್ಠಾಪಿಸುತ್ತಾರೆ.
ಆಚರಣೆಗೆ ಶ್ಲಾಘನೆ: ಭಜನೆ ಹಾಗೂ ಸಂಗೀತ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಪಾದಯಾತ್ರೆ ಕೈಗೊಂಡು ಲಕ್ಷ್ಮಮ್ಮ ದೇವತೆಗೆ ಸಿಹಿ ತಿನಿಸುಗಳ ನೈವೇದ್ಯ ಸಲ್ಲಿಸಿ ಪೂಜೆ ಮಾಡಿ ಉತ್ತಮ ಮಳೆ- ಬೆಳೆಯಾಗಿ ರೈತರ ಬದುಕಿನಲ್ಲಿ ಸಂತಸ ಮೂಡುವ ಜೊತೆಗೆ ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಆಚರಿಸುವ ವಾಡಿಕೆ ಶ್ಲಾಘನೀಯ ಎಂದು ಹೇಳಿದರು.
ಮೆರವಣಿಗೆಯಲ್ಲಿ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಖಂಡರಾದ ಜಿ.ಬಸವರಾಜರೆಡ್ಡಿ, ಎಂ.ನಾಗರೆಡ್ಡಿ, ಪುಂಡ್ಲ ನರಸರೆಡ್ಡಿ, ಪಕೀರಪ್ಪಗಾರ ನರಸರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಬುರ್ತಪ್ಪಗಾರ ಆಂಜಿನೇಯ, ಕುಕ್ಕಲ ನರಸಿಂಹಲು, ನಿಂಬೇಕಾಯಿ ನಾರಾಯಣರೆಡ್ಡಿ, ಎಸ್.ವೆಂಕಟರೆನಡ್ಡಿ, ಎನ್.ಜನಾರ್ಧನರೆಡ್ಡಿ, ಕೆ.ರವಿ, ಗುಟ್ಟಲ ಹನುಮಂತು ಸೇರಿದಂತೆ ಲಕ್ಷ್ಮಮ್ಮ ದೇವಿ ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಸಮಾಜ ನೂರಾರು ಜನರು ಭಾಗವಹಿಸಿದ್ದರು.