ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸವೇಶ್ವರ ಕುಂಭೋತ್ಸವ ಸಂಭ್ರಮ

Mainashree
Updated On : 31 Aug 2013, 10:54 am

ಸಿಂಧನೂರು: ತಾಲೂಕಿನ ಅಲಬನೂರಲ್ಲಿ ಶ್ರಾವಣ ಮಾಸದ ನಿಮಿತ್ತ ಗ್ರಾಮದ ಆರಾಧ್ಯ ದೇವರಾದ ಬಸವೇಶ್ವರ ಕುಂಭೋತ್ಸವ ಅದ್ಧೂರಿಯಿಂದ ನಡೆಯಿತು.
ಬಸವೇಶ್ವರರ ಹಾಗೂ ಹನುಮಪ್ಪನ ಕುಂಭಗಳು ಧಾರ್ಮಿಕ ವಿಧಿ- ವಿಧಾನಗಳ ಮೂಲಕ ದಢಸೂಗೂರು ಗ್ರಾಮಕ್ಕೆ ತೆರಳಿದವು. ಅಲ್ಲಿಯ ಅಲಬನೂರು ಗ್ರಾಮದ ಧಣಿಗಳಾದ ಆಶೋಕ ಭೂಪಾಲ ನಿವಾಸದ ಹತ್ತಿರ ತುಂಗಾಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಪವಿತ್ರ ಗಂಗಾಜಲದೊಂದಿಗೆ ಗ್ರಾಮಕ್ಕೆ ಆಗಮಿಸಿತು. ಪ್ರಸಕ್ತ ವರ್ಷದ ಉತ್ತಮ ಮಳೆ, ಬೆಳೆ, ಗ್ರಾಮದ ಅಭಿವೃದ್ಧಿಯಾಗುತ್ತದೆ. ದಡೇಸ್ಗೂರಿಗೆ ತೆರಳುವ ರಸ್ತೆಯಾಗಬೇಕೆಂದು ಕುಂಭ ಹೊತ್ತ ಬಸವರಾಜ ಪೂಜಾರಿ ಹೇಳಿದರು.
ಈ ಪರಂಪರೆ ನೂರಾರು ವರ್ಷಗಳಿಂದ ನಡೆದು ಬಂದಿದ್ದು ಈ ಗ್ರಾಮದ ವಿಶೇಷ. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ವಿಎಸ್‌ಎಸ್‌ಎನ್ ಬ್ಯಾಂಕಿನ ಅಧ್ಯಕ್ಷ ಜಗನ್ನಾಥರಾವ್ ಕುಲ್ಕರ್ಣಿ, ಗ್ರಾಮದ ಮುಖಂಡರಾದ ವೆಂಕೋಬರಾವ್ ಕುಲ್ಕರ್ಣಿ, ಈಶ್ವರಪ್ಪ, ಪಂಪನಗೌಡ ಪ್ಯಾಟಿ, ಗುತ್ತೇದಾರ ಪಂಪಾಪತಿ ಅಲಬನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಬೇರೆ ಸ್ಥಳದಿಂದ ಬಂದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement