ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 31 Aug 2013, 10:56 am

ಇಂದು ವಿವಿಧ ಮಾಹಿತಿ ನೀಡಿಕೆ
ರಾಯಚೂರು:  ನಗರದಲ್ಲಿ ನಡೆಯುತ್ತಿರುವ ಭಾರತ್ ನಿರ್ಮಾಣ ಸಾರ್ವಜನಿಕ ಮಾಹಿತಿ ಕಾರ್ಯಾಗಾರದಲ್ಲಿ ಆ.31ರಂದು ಆಧಾರ್ ಸೇರಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತ ಸರ್ಕಾರದ ವಾರ್ತಾ ಇಲಾಖೆ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಅನ್ಯ ಮಾಧ್ಯಮ ಘಟಕಗಳು, ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಾಗಾರದಲ್ಲಿ ಆ.31 ರಂದು ಬೆಳಗ್ಗೆ 11ಕ್ಕೆ ಆಧಾರ್, ಆಹಾರ ಭದ್ರತಾ ಕಾಯಿದೆ, ಸಾಮಾಜಿಕ ಭದ್ರತಾ ಯೋಜನೆಗಳು, ನೇರ ನಗದು ವರ್ಗಾವಣೆ, ಸಕಾಲ, ಭೂಸ್ವಾಧೀನ ಕಾಯಿದೆ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸಾಲ ಯೋಜನೆ: ಅರ್ಜಿ ಆಹ್ವಾನ
ರಾಯಚೂರು:  ಜಿಲ್ಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ಫಲಾಪೇಕ್ಷೀಗಳಿಂದ ವಿವಿಧ ಯೋಜನೆಗಳಡಿ ಸಾಲಕ್ಕಾಗಿ ಅರ್ಜಿ ಕರೆಯಲಾಗಿದೆ. ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಮತ್ತು ಸಾಮೂಹಿಕ ಏತ ನೀರಾವರಿ ಯೋಜನೆ, ಮೈಕ್ರೋ ಕ್ರೆಡಿಟ್ ಯೊಜನೆ, ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ, ನೇರಸಾಲ ಯೋಜನೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ನಿಗಮದ ಜಿಲ್ಲಾ ಶಾಖೆಯಿಂದ ಅರ್ಜಿ ಪಡೆದು ಸೆ.16ರೊಳಗೆ ಸಲ್ಲಿಸಬೇಕು.
ಒಂದು ನೆನಪು ಕಾರ್ಯಕ್ರಮ ಇಂದು
ಸಿಂಧನೂರು: ಸ್ಥಳೀಯ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ 2003ನೇ ಸಾಲಿನ ವಿದ್ಯಾರ್ಥಿಗಳಿಂದ ಶಾಲೆಯ ಒಂದು ನೆನಪು ಕಾರ್ಯಕ್ರಮ ನಾಳೆ ಅ.31 ರಂದು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಎಸ್‌ಬಿಐ ಸಹಾಯಕ ಮ್ಯಾನೇಜರ್ ಬಸವರಾಜ ಹಣಗಿ ಉದ್ಘಾಟಿಸುವರು. ಶಾಲೆಯ ಮುಖ್ಯಗುರು ಗಂಗನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಶಿಕ್ಷಕರಾದ ಎಸ್.ಕೆ. ಹೊಟ್ಟಿನ್, ಎಸ್.ಜಿ. ಸಣ್ಣಪ್ಪನವರ್, ಪತ್ರಕರ್ತರಾದ ಅಶೋಕ ಬೆನ್ನೂರು, ಚಂದ್ರಶೇಖರ ಯರದಿಹಾಳ ಭಾಗವಹಿಸಲಿದ್ದಾರೆ.
ಹಾವು ಕಚ್ಚಿ ಮಹಿಳೆ ಸಾವು
ರಾಯಚೂರು:  ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಿಂಧನೂರಿನ ನಾಗಮ್ಮ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement