ಆರೋಗ್ಯ ತಪಾಸಣೆ
ರಾಯಚೂರು: ನಗರದ ಸ್ಕೌಟ್ ಭವನದಲ್ಲಿ ಇತ್ತೀಚೆಗೆ ಲಯನ್ಸ್ ಕ್ಲಬ್ ವತಿಯಿಂದ ಶಾಲೆಯಿಂದ ಹೊರಗುಳಿದಿದ್ದ ಮಕ್ಕಳ ಆರೋಗ್ಯದ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶಾಲೆ ಬಿಟ್ಟ 50 ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಪುನಾ ಶಾಲೆಗೆ ಕರೆತಂದಿದ್ದು, ಇಂಥ ಮಕ್ಕಳ ಆರೋಗ್ಯದ ತಪಾಸಣೆಯನ್ನಿ ಡಾ. ಎನ್.ಗಂಗಾ ವಿಜಯಶಂಕರ್ ಮತ್ತು ಡಾ.ವಿಜಯಶಂಕರ್ ನಡೆಸಿ ಔಷಧಿ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಶಿವಪ್ರತಾಪ್, ಕಾರ್ಯದರ್ಶಿ ಕೃಷ್ಣ, ಗೋವಿಂದರಾಜ್, ಮಹೇಶ್ ತುಪ್ಪದ್, ಬೆಲ್ಲಂ ಮೋಹನರೆಡ್ಡಿ ಸೇರಿ ಅನೇಕರಿದ್ದರು.