ನೂರಾರು ಜನರ ರಕ್ತ ತಪಾಸಣೆ
ಸಿಂಧನೂರು: ನಗರದ ಮಹೆಬೂನಿಯಾ ಕಾಲೋನಿಯ ನೂರಾನಿ ಮಸ್ಜೀದ್ ಆವರಣದಲ್ಲಿ 100ಕ್ಕೂ ಹೆಚ್ಚು ಜನ ತಮ್ಮ ರಕ್ತ ತಪಾಸಣೆ ಮಾಡಿಸಿಕೊಂಡರು.
ಖಾನ ಲ್ಯಾಬ್ನ ಬರಕತ್ ಮತ್ತು ಮಹೆಬೂಬ ಹಮ್ಮಿಕೊಂಡಿದ್ದ ಉಚಿತ ರಕ್ತ ತಪಾಸಣೆಯ ಕಾರ್ಯಕ್ರಮದಲ್ಲಿ ಜನರು ರಕ್ತ ತಪಾಸಣೆ ಮಾಡಿಸಿಕೊಂಡರು.
ಫಯಾಜ್ಪೀರಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಈ ರಕ್ತ ತಪಾಸಣಾ ಶಿಬಿರದಲ್ಲಿ ವಾರ್ಡಿನ ಮೈನುದ್ದಿನ್, ಅಬ್ದುಲ್ ಖಾದಿರ್, ಅಫ್ಜಲ್ ಹುಸೇನ ಕಸಬವಾಡಿ, ಡಿ.ಜೆ.ತಾಜ್, ನಿಸಾರಖಾನ, ಮೌಲಾನಾ ತಾಜುಮುದ್ದಿನ್, ಸಲೀಂ ಸೇರಿದಂತೆ ಅನೇಕ ಭಾವಗಹಿಸಿದ್ದರು.
ಅತಿಥಿ ಉಪನ್ಯಾಸಕ: ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಅತಿಥಿ ಉಪನ್ಯಾಸಕರ ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿ ಗಳು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಅತಿಥಿ ಉಪನ್ಯಾಸಕರ ನೇಮಕಾತಿಯು ಸರ್ಕಾರದ ಆದೇಶದ ವಿವಿಧ ಷರತ್ತುಗಳಿಗೊಳಪಟ್ಟಿರುತ್ತದೆ.
ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಲು ಸೆ.2 ಕಡೆಯ ದಿನ ಎಂದು ಡಿಡಿಪಿಯು ಕಚೇರಿ ತಿಳಿಸಿದೆ.