ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹಿಳೆಗೆ ಕಾನೂನು ಅರಿವು ಅಗತ್ಯ: ವಿಜಯಲಕ್ಷ್ಮೀ

Rashmi Kasaragodu
Updated On : 1 Sept 2013, 11:40 am

ಕನ್ನಡಪ್ರಭ ವಾರ್ತೆ   ಮುದಗಲ್   ಆ.31
ಕಾನೂನು ಅರಿವು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಅವಶ್ಯ. ಕಾಲ ಕಾಲದಿಂದಲೂ ಮಹಿಳೆಗೆ ಅಡುಗೆ ಮನೆಯೊಂದೇ ಮೀಸಲಾಗಿದ್ದರಿಂದ ಇತ್ತೀಚೆಗೆ ಮಹಿಳೆಗೆ ಕೂಡ ಕಾನೂನು ಅರಿವು ನೆರವು ಅಗತ್ಯವಾಗಿದೆ ಎಂದು ಮುದಗಲ್ ಪಪಂ ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ ಹೇಳಿದರು.
ಪಟ್ಟಣದ ಮೇಗಳಪೇಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯವರು ಹಮ್ಮಿಕೊಂಡ ಹೋಬಳಿ ಮಟ್ಟದ ಒಂದು ದಿನದ ಕಾನೂನು ಅರಿವು ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರಗಳಿಂದ ಜಾಗೃತಿ: ಮುಖ್ಯ ಅತಿಥಿಯಾಗಿದ್ದ ಇಲಾಖೆಯ ಅಧಿಕಾರಿ ಸಿಡಿಪಿಒ ಪ್ರಭಾಕರ ಮಾತನಾಡಿ, ನಮ್ಮ ಇಲಾಖೆಗಳ ಮೂಲಕ ಕಾನೂನು ನೆರವು ಅರಿವು ಶಿಬಿರಗಳಿಂದ ಮಹಿಳೆಯರು ಸ್ತ್ರೀಶಕ್ತಿ ಗುಂಪುಗಳಿಂದ ಸ್ವಾವಲಂಬಿ ಬದುಕಿಗೆ ಮಾರ್ಗಹುಡುಕಿ ಕೊಟ್ಟಿದೆ. ಇಂತಹ ಶಿಬಿರಗಳಲ್ಲಿ ಹೆಚ್ಚೆಚ್ಚು ಮಹಿಳೆಯರು ಭಾಗವಹಿಸುವಂತಾಗಿದೆ ಎಂದು ಹೇಳಲು ಸಂತೋಷವೆನಿಸುತ್ತದೆ ಎಂದರು.
ತಜ್ಞ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ಮಹಿಳೆಯರು ಪ್ರತಿ ಹಂತದಲ್ಲೂ ಪುರುಷರ ಸಮನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ಸಂಗತಿ. ಕಾನೂನು ಅರಿವು ಸದುಪಯೋಗವಾಗಬೇಕೆ ವಿನಃ ದುರುಪಯೋಗವಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಪಂ ಸದಸ್ಯೆ ಶರಣಮ್ಮ ನಂದಪ್ಪ ಕತ್ತಿ ವಹಿಸಿದ್ದರು. ನ್ಯಾಯವಾದಿಗಳಾದ ಚಂದ್ರಶೇಖರ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು, ಕೆ.ಬಾಷುಮೀಯಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಗಂಗನಗೌಡ ಬಿರಾದಾರ ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ಮತ್ತು ಅಡಿವೇಶ ಮಹಿಳೆಯರಿಗೆ ಜೀವನಾಂಶ ಕಾಯ್ದೆ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement