ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಧಿಕ ಬತ್ತ ಖರೀದಿಗೆ ಅಧಿಕಾರಿಗಳು ಸಹಕರಿಸಲಿ

Lingaraj Badiger
Updated On : 2 Dec 2013, 11:41 am

ಸಿಂಧನೂರು: ನಗರದ ಎಪಿಎಂಸಿ ಹೊಸ ಗಂಜ್‌ನಲ್ಲಿ ರೈತರಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಶ್ರಯದಲ್ಲಿ ಭಾನುವಾರ ಬತ್ತ ಖರೀದಿ ಕೇಂದ್ರವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ರೈತರಿಗೆ ಅನುಕೂಲವಾಗುವಂತಹ ಬತ್ತ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದರು.
ಎಲ್ಲ ರೈತರಿಂದ ಹೆಚ್ಚು ಹೆಚ್ಚು ಬತ್ತವನ್ನು ಖರೀದಿ ಮಾಡಿ ಅಧಿಕಾರಿಗಳು ಸಹಕರಿಸಬೇಕು. ಇದರ ಸದುಪಯೋಗವನ್ನು ತಾಲೂಕಿನ ಎಲ್ಲ ರೈತರು ಪಡೆದುಕೊಳ್ಳಬೇಕು. ಜೊತೆಗೆ ವ್ಯಾಪಾರಸ್ಥರು ಮತ್ತು ರೈತರು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ವ್ಯಾಪಾರ ಮುಂದುವರೆಸಿದಾಗ ಮಾತ್ರ ಇಂತಹ ಬತ್ತ ಖರೀದಿ ಕೇಂದ್ರಗಳಿಗೆ ಬೆಲೆ ಸಿಗಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಹುಡಾ, ಆಹಾರ ಇಲಾಖೆಯ ರಾಯಚೂರು ಅಧಿಕಾರಿ ಕದಂಬರು, ಎಪಿಎಂಸಿ ಸದಸ್ಯ ಮಲ್ಲನಗೌಡ ಮೇಟಿ, ಎಪಿಎಂಸಿ ಪ್ರಭಾರಿ ಕಾರ್ಯದರ್ಶಿ ನರಸಿಂಹರೆಡ್ಡಿ, ಆನಂದ ಮತ್ತಿತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement