ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಾಳೆಗಾರಿಕೆ ರಾಜಕಾರಣಕ್ಕೆ ಇತಿಶ್ರೀ: ನಾಯ್ಕ್

Vishwanath S
Updated On : 3 Dec 2013, 11:30 am

ಮುದಗಲ್: ಲಿಂಗಸ್ಗೂರು ತಾಲೂಕಿನಲ್ಲಿ ಪಾಳೆಗಾರಿಕೆ ರಾಜಕಾರಣವನ್ನು ಅತ್ತಿಕ್ಕಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಎಲ್ಲಾರಿಗೂ ಅಧಿಕಾರ ಸಿಗುವಂತೆ ಮಾಡಲು ಪಕ್ಷಾತೀತವಾಗಿ ಶ್ರಮಿಸಲು ಮೂರನೆ ಶಕ್ತಿ ಹುಟ್ಟಿಕೊಂಡಿದೆ ಎಂದು ನಿವೃತ್ತ ಡಿಐಜಿ ಬಿಜೆಪಿ ಮುಖಂಡ ಟಿ.ಆರ್. ನಾಯ್ಕ್ ಹೇಳಿದರು.
ಆಶಿಹಾಳ ತಾಂಡಾದ ತಮ್ಮ ನಿವಾಸದಲ್ಲಿ ನೂತನವಾಗಿ ಆಯ್ಕೆಯಾದ ತಾ.ಪಂ. ಅಧ್ಯಕ್ಷೆ ಬಸ್ಸಮ್ಮ ಹಟ್ಟಿಯವರಿಗೆ ಸನ್ಮಾನ ಮಾಡಿ ಮಾತನಾಡಿ, ತಾಲೂಕಿನಲ್ಲಿ ಬಯ್ಯಾಪೂರ ಅಮರೇಗೌಡ  ಅವರ ಪಾಳೆಗಾರಿಕೆಯಿಂದ ಅನೇಕ ಚುನಾಯಿತ ತಾ.ಪಂ., ಪ.ಪಂ., ಜಿ.ಪಂ, ಗ್ರಾ.ಪಂ ಸದಸ್ಯರು ಅಸಮಧಾನಗೊಂಡಿದ್ದಾರೆ. ಆದ್ದರಿಂದ ಇತ್ತೀಚಿಗೆ ನಡೆದ ತಾ.ಪಂ. ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸದಲ್ಲಿ ಕಾಂಗ್ರೆಸ್‌ನ 8 ಸದಸ್ಯರು ಪಕ್ಷ ಮುಖಂಡರ ವಿರುದ್ಧ ಸೆಡ್ಡು ಹೊಡೆದು ಜೆಡಿಎಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದರು. ತಾಪಂ ಅಧ್ಯಕ್ಷೆ ಜೆಡಿಎಸ್‌ನ ಬಸ್ಸಮ್ಮ ಹಟ್ಟಿಯವರಿಗೆ ಶಾಲು ಹೋದಿಸಿ ಸನ್ಮಾನಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದನಗೌಡ ಪೋ.ಪೋ, ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ಮುಬೀನ, ತಾ.ಪಂ. ಸದಸ್ಯ ರುದ್ರಗೌಡ ತುರಡಗಿ, ಗುಂಡಪ್ಪ ಸಾಹುಕಾರ ಇತರರಿದ್ದುರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement