ಮಹಿಷಿ ರಥ, ಬೈಕ್ ರ್ಯಾಲಿಗೆ ಸಂಭ್ರಮದ ಸ್ವಾಗತ
ಮುದಗಲ್: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ರಾಯಚೂರಿನಿಂದ ಬೆಳಗಾವಿಗೆ ಹೊರಟ ಮಹಿಷಿ ರಥ ಮತ್ತು ಬೈಕ್ ರ್ಯಾಲಿಯನ್ನು ಪಟ್ಟಣದ ಹಿರಿಯ ದಲಿತ ಮುಖಂಡ ಹಾಗೂ ಪಪಂ ಮಾಜಿ ಸದಸ್ಯ ರಾಮಣ್ಣ ಹಿರೇಮನಿ ನೇತೃತ್ವದಲ್ಲಿ ದಲಿತ ಸಂಘಟನೆಯ ಮುಖಂಡರು, ದಲಿತ ಸಮುದಾಯ ಹಿರಿಯರು ಸಂಭ್ರಮದಿಂದ ಬರಮಾಡಿಕೊಂಡರು.
ಸದಾಶಿವ ಆಯೋಗದ ವರದಿ ಜಾರಿಗೆಯನ್ನು ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲೇ ಜಾರಿಗೆಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ದಲಿತ ಸಂಘಟನೆಯವರು ರಾಯಚೂರಿನಿಂದ ಬೆಳಗಾವಿಗೆ 1000 ಕಿಮೀ ಬೈಕ್ ರ್ಯಾಲಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಲು ಮಹಿಷಿ ರಥದ ಮೂಲಕ ತೆರಳಲಾಯಿತು.