ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೂಡಲದಿನ್ನಿ ಅಂಗನವಾಡಿ ಕೇಂದ್ರಕ್ಕೆ ಬೀಗ

Lingaraj Badiger
Updated On : 4 Dec 2013, 11:00 am

ಕ.ಪ್ರ.ವಾರ್ತೆ      ಮುದಗಲ್  ಡಿ.3
ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಂದ ಪಡಿತರವನ್ನು ಸರಿಯಾಗಿ ಹಂಚಿಕೆ ಮಾಡದೇ ಇರುವುದರಿಂದ ಬೇಸತ್ತ ಗ್ರಾಮಸ್ಥರು ಮಂಗಳವಾರ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಸಮೀಪದ ಮೂಡಲದಿನ್ನಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕರೆತರುವುದು, ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕ ಧಾನ್ಯ, ಕಲಿಕಾ ಸಾಮಗ್ರಿ ಪೂರೈಕೆಯನ್ನು ಸಮರ್ಪಕವಾಗಿ ಮಾಡದೇ ಕರ್ತವ್ಯಲೋಪ ವೆಸಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಾಲೂಕು ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ನಮೂದಿಸಿದ್ದಾರೆ.
ಮೇಲ್ವಿಚಾರಕಿ ಪತಿ ದೌರ್ಜನ್ಯ: ಅಂಗನವಾಡಿ ಕೇಂದ್ರವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದಕ್ಕೆ ಮೇಲ್ವಿಚಾರಕಿಗೆ ಕೇಳಿದರೆ ಆತನ ಪತಿ ಗ್ರಾಮದಲ್ಲಿ ಆವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ದೌರ್ಜನ್ಯ ಮಾಡುತ್ತಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸರ್ಕಾರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಿದರೆ ಇತ್ತ ಮೂಡಲದಿನ್ನಿಯಲ್ಲಿ ಅಂಗನವಾಡಿ ಕೇಂದ್ರದಿಂದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲವಾದ್ದರಿಂದ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟಿಸಬೇಕಾಗಿದೆ. ಕೂಡಲೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ತುಳಜಾಬಾಯಿ ಹನುಮಂತಪ್ಪ ರಾಠೋಡ ಅವರನ್ನು ಸೇವೆಯಿಂದ ನಿಯುಕ್ತಿಗೊಳಿಸಿ ಬೇರೆಯವರನ್ನು ನಿಯೋಜಿಸುವಂತೆ ಗ್ರಾಪಂ ಸದಸ್ಯ ವೆಂಕೋಬ ಪೂಜಾರಿ, ರುದ್ರಮ್ಮ ಜಂಗಮರಹಳ್ಳಿ, ಗ್ರಾಮಸ್ಥರಾದ ಆದಪ್ಪ ಸೂಗೂರು, ಚಂದ್ರಶೇಖರ್ ಸೂಗುರು, ವೀರನಗೌಡ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement