ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೀಮೆಎಣ್ಣೆ ಅಕ್ರಮ ಸಾಗಾಣಿಕೆ ಪ್ರಕರಣ

Lingaraj Badiger
Updated On : 4 Dec 2013, 11:06 am

ಸಿಂಧನೂರು: ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಒಂದು ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಅನಧಿಕೃತವಾಗಿ ಜನರೇಟರ್ ಸಹಾಯದಿಂದ ಸೀಮೆಎಣ್ಣೆ ತುಂಬಿಸಿ, ಸಾಗಾಣಿಕೆ ಮಾಡಲು ಯತ್ನಿಸಿದ ಪ್ರಕರಣದ ಹಿಂದೆ ಪ್ರಭುದಾಸ ಜಗಜೀವನದಾಸ ಕಂಪನಿ ಸಬ್ ಡೀಲರ್ ಆಲ್ದಾಳ ವೀರಭದ್ರಪ್ಪ ಮಾನವಿ ಹಾಗೂ ಆಹಾರ ಶಿರಸ್ತೇದಾರ ಆನಂದ ಮೋಹನ್, ಸಿಬ್ಬಂದಿ ಜಾನಿಮಿಯಾ ಅವರ ನೇರ ಕೈವಾಡವಿದೆ. ಅವರ ಮೇಲೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸಹಾಯಕ ಆಯುಕ್ತರಿಗೆ ದಲಿತ ರಕ್ಷಣಾ ವೇದಿಕೆ ಗುಲ್ಬರ್ಗ ವಿಭಾಗೀಯ ಸಮಿತಿ ಅಧ್ಯಕ್ಷ ಹನುಮಂತ ಹಂಚಿನಾಳಕ್ಯಾಂಪ್.ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಸೋಮಲಾಪುರ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಕ್ರಮ ಕೈಗೊಳ್ಳಿ: ಈ ಕುರಿತು ಹೇಳಿಕೆ ನೀಡಿರುವ ಅವರು ಪಡಿತರಿಗೆ ಸೇರಬೇಕಾದ ಸೀಮೆಎಣ್ಣೆಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಮೃದು ಧೋರಣೆ ತಾಳಿದ್ದಾರೆ. ಆಹಾರ ಶಿರಸ್ತೇದಾರ ಆನಂದ ಮೋಹನ ಪೊಲೀಸ್ ಇಲಾಖೆಗೆ ಪ್ರಭುದಾಸ ಜಗಜೀವನದಾಸ ಕಂಪನಿಯ ವಿರುದ್ದ ದೂರು ಕೊಡುವ ಮೂಲಕ ಸಬ್ ಡೀಲರ್ ವೀರಭದ್ರಪ್ಪ ಮಾನವಿ ಹಾಗೂ ತಾನು ಬಚಾವಾಗಲು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಕ್ಷ್ಯಾಧಾರಗಳ ನಡುವೆಯೂ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದ್ದು, ಸಹಾಯಕ ಆಯುಕ್ತರು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು  ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement