ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಗೆ ನಿರ್ಧಾರ
ಲಿಂಗಸ್ಗೂರು: ತಾಲೂಕು ಆಡಳಿತದಿಂದ ಡಿ. 6ರಂದು ಡಾ. ಅಂಬೇಡ್ಕರ್‌ರ ಮಹಾಪರಿರ್ವಾಣ ದಿನ ಆಚರಣೆ ಅಂಗವಾಗಿ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ಜರುಗಿತು.
ತಹಸೀಲ್ದಾರ್ ಎಸ್. ಮಹಾಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರ ಆದೇಶದ ಮೇರೆಗೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಡಾ. ಅಂಬೇಡ್ಕರ್ 58ನೇ ಮಹಾಪರಿರ್ವಾಣ ದಿನವನ್ನು ಪ್ರಥಮ ಬಾರಿಗೆ ಸರ್ಕಾರದಿಂದ ಆಚರಿಸಲು ನಿರ್ಧರಿಸಲಾಗಿದ್ದು, ತಾಲೂಕಿನ ಎಲ್ಲ ಇಲಾಖೆಗಳ ಕಚೇರಿಯಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಬೇಕೆಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ.ಸಜ್ಜನ್, ಸಿಪಿಐ ವರದರಾಜು, ಸಿಡಿಪಿಒ ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ, ಅರಣ್ಯ ಇಲಾಖೆ ಅಧಿಕಾರಿ ಪ್ರಭಾಕರ, ಸಾರಿಗೆ ಘಟಕ ವ್ಯಾವಸ್ಥಾಪಕ ಬಸವರಾಜ ನಾಯಕ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಮೂಲಿಮನಿ, ಉಪನ್ಯಾಸಕ ಜಿ.ವಿ.ಕೆಂಚನಗುಡ್ಡ, ಗಿರಿರಾಜ ಹೊಸಮನಿ, ಶಂಕರಗೌಡ ಇತರರಿದ್ದರು.
--
ಕೊಪ್ಪಳದಲ್ಲಿ ದಿನಾಚರಣೆ
ರಾಯಚೂರು: ಡಾ.ಅಂಬೇಡ್ಕರರ ಮಹಾ ಪರಿನಿರ್ವಾಣ ದಿನಾಚರಣೆ, ಅಂಬೇಡ್ಕರರ ಧಮ್ಮ ದೀಕ್ಷೆ ಕುರಿತ ನಿಷ್ಕರ್ಷೆ ಕಾರ್ಯಕ್ರಮ 6ರಂದು ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಬಿ. ಯೇಸು ತಿಳಿಸಿದ್ದಾರೆ. ಕೊಪ್ಪಳದ ಸಾಹಿತ್ಯ ಭವನದಲ್ಲಿ ಡಿ.7ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ. ಗುಲ್ಬರ್ಗ ವಿಭಾಗಮಟ್ಟದ ಕಾರ್ಯಕ್ರಮ ಇದಾಗಿದೆ. ಡಿ.7ರಂದು ಇದೇ ಕಾರ್ಯಕ್ರಮ ದಾವಣಗೆರೆಯ ರೋಟರಿ ಬಾಲಭವನದಲ್ಲಿ ಹಾಗೂ ಡಿ.8ರಂದು ಚಿತ್ರದುರ್ಗದ ಐಎಂಎ ಹಾಲ್‌ನಲ್ಲಿಯೂ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ...
ರಾಯಚೂರು: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ 6ರಂದು ಅಂಬೇಡ್ಕರ ಪರಿನಿರ್ವಾಣ ದಿನಾಚರಣೆ ಅಂಗವಾಗಿ ನುಡಿನಮನ ಕಾರ್ಯಕ್ರಮ ಬೆಳಗ್ಗೆ 9.30 ಗಂಟೆಗೆ ಆಯೋಜಿಸಲಾಗಿದೆ.