ಅಯ್ಯಪ್ಪಸ್ವಾಮಿ ಭಕ್ತರ ಬೈಕ್ಯಾತ್ರೆ
ಲಿಂಗಸ್ಗೂರು: ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವರ ದರ್ಶನ ಪಡೆಯಲು ಅಯ್ಯಪ್ಪಸ್ವಾಮಿ ವೃತ ಆಚರಿಸುವ ಗುರುಸ್ವಾಮಿ ಕುಬೇರ್ ಅವರ ನೇತೃತ್ವದಲ್ಲಿ ಬುಧವಾರ 8 ಜನ ಭಕ್ತರು ಸುಮಾರು 2200 ಕಿಮೀ ವರೆಗೆ ಬೈಕ್ಯಾತ್ರೆ ಕೈಗೊಂಡರು.
ಇಂದು ರಕ್ತದಾನ
ಸಿಂಧನೂರು: ಡಾ. ಅಂಬೇಡ್ಕರರ 57ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಡಿ.6ರಂದು ಅರ್ಥಪೂರ್ಣವಾಗಿ ಅಚರಿಸಲಾಗುತ್ತದೆ ಎಂದು ತಹಸೀಲ್ದಾರ್ ವೆಂಕನಗೌಡ ಪಾಟೀಲ್ ತಿಳಿಸಿದ್ದಾರೆ. ಬೆ.9ಕ್ಕೆ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ವೃತ್ತಕ್ಕೆ ಮಾಲಾಪಣೆ, 10 ಗಂಟೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಬೇಕು. ರಕ್ತದಾನ ಮಾಡುವ ಆಸಕ್ತರು ತಾಲೂಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೊ. 9480843185ಕ್ಕೆ ಸಂಪರ್ಕಿಸಿ.
ಲಾರಿ ಡಿಕ್ಕಿ: ವಿದ್ಯಾರ್ಥಿಗೆ ಕಾಲು ಮೂಳೆ ಮುರಿತ
ಮುದಗಲ್: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಕಾರ್ತೀಕ್ (6) ತೀವ್ರ ಗಾಯಗೊಂಡ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ. ಮಂಜುನಾಥ ಕಂದಗಲ್ (6) ಎಂಬವರ ಪುತ್ರನಾಗಿರುವ ಕಾರ್ತೀಕ್ಗೆ ಬಲಗಾಲು ಮುರಿದಿದೆ. ಚಾಲಕನನ್ನು ಬಂಧಿಸಲಾಗಿದೆ. ಈ ಕುರಿತು ದೂರು ದಾಖಲಾಗಿದೆ.