ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೈಚಾರಿಕತೆಗೆ ಹೊಸ ಚೈತನ್ಯ ನೀಡಿದ ಕನಕ ವಿಶ್ವಮಾನವ: ಬಸಮ್ಮ

Lingaraj Badiger
Updated On : 6 Dec 2013, 11:57 am

ಸಿಂಧನೂರು: ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನು ನೀವೇನಾದರೂ ಬಲ್ಲಿರಾ.. ಎನ್ನುವ ಸಂದೇಶ ಸಾರುವ ಮೂಲಕ ವೈಚಾರಿಕತೆಗೆ ಹೊಸ ಚೈತನ್ಯ ತುಂಬಿದ ಕನಕದಾಸರು ವಿಶ್ವಮಾನವ ಎಂದು ಜಿಪಂ ಸದಸ್ಯೆ ಬಸಮ್ಮ ಕುಂಟೋಜಿ ಬಣ್ಣಿಸಿದರು.
ತಾಲೂಕಿನ ಹಿರೇಬೇರಿಗಿಯಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ದ್ಯಾವಮ್ಮ ಗುಡಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಸ್ವಾರ್ಥ ಮನೋಭಾವನೆಯಿಂದ ಇಡೀ ಬದುಕನ್ನು ಸಮಾಜಕ್ಕೆ ಮುಡುಪಿಟ್ಟ ಕನಕದಾಸರಿಂದ ಕಲಿಯುವಂತದ್ದು ಬಹಳವಿದೆ. ಯುವಜನರು, ವಿದ್ಯಾರ್ಥಿಗಳು ಮೌಲ್ಯಗಳಿಗೆ ಬೆಲೆಕೊಟ್ಟು ಬದುಕುವಂತಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನಿಂಗಪ್ಪ ಕಟ್ಟಿಮನಿ ಮಾತನಾಡಿದರು. ಎಪಿಎಂಸಿ ಸದಸ್ಯ ಫಾರೂಖ್‌ಸಾಬ ಖಾಜಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಸಿದ್ದಯ್ಯಸ್ವಾಮಿ ಹಿರೇಮಠ, ಶೇಖರಗೌಡ ದೇವರಮನಿ ತುರ್ವಿಹಾಳ, ಶಂಕ್ರಗೌಡ ಮಾಲಿ ಪಾಟೀಲ್, ಬಜ್ಜಣ್ಣ ಕುಂಟೋಜಿ ಹಿರೇಬೇರ್ಗಿ, ಗ್ರಾಮದ ಹಿರಿಯರಾದ ಗ್ಯಾನಪ್ಪ ನೈಕೊಡಿ, ಹನುಮಂತಪ್ಪ ನೈಕೊಡಿ, ಪಂಪಾಪತಿ ಗರ್ಜಿನಾಳ, ಮಾನಪ್ಪ ಸಾಲಿತಾಳ, ಅಮರೇಶ ಗೋನಾಳ ಚಿಕ್ಕಭೇರ್ಗಿ, ಬಸಣ್ಣ ಜೂಲಗುಡ್ಡ, ಮಾನಪ್ಪ ಗುಡಿತ್ತಾಳ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement