ಬಿಎಸ್ಪಿಗೆ ನೂತನ ಪದಾಧಿಕಾರಿಗಳು
ಲಿಂಗಸ್ಗೂರು: ಬಹುಜನ ಸಮಾಜ ಪಾರ್ಟಿಯ ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಹನುಮಂತರಾಯ ಕಪಗಲ್ ತಿಳಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ನೂತನ ಅಧ್ಯಕ್ಷರಾಗಿ ಆದಣ್ಣ ದೇವರಭೂಪೂರ, ಉಪಾಧ್ಯಕ್ಷರಾಗಿ ಬಿ.ಮನ್ಮಥ ಚಲುವಾದಿ, ಶಾಮೀದಲಿ ಕರಡಕಲ್, ಪ್ರಧಾನ ಕಾರ್ಯದರ್ಶಿ ಹುಲಗೆಪ್ಪ ಕೆಸರಟ್ಟಿ, ಕಚೇರಿ ಕಾರ್ಯದರ್ಶಿ ನಿಂಗಪ್ಪ ಪೂಜಾರಿ ನೇಮಕವಾಗಿದ್ದಾರೆ.
ಖಜಾಂಚಿ ಬಸವರಾಜ ಈಚನಾಳ, ಗುರುಗುಂಟಾ ಹೋಬಳಿ ಅಧ್ಯಕ್ಷ ಸೋಮಪ್ಪ ನಾಯಕ, ಉಪಾಧ್ಯಕ್ಷರಾಗಿ ಲಾಲ್ ಮಹ್ಮದ್ ಚಿಕ್ಕಟಗಿ, ಕಾರ್ಯದರ್ಶಿ ಸುಕುಮುನೆಪ್ಪ ಚನ್ನಪಟ್ಟಣ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.