ಕರವೇ ಗ್ರಾಮ ಘಟಕ ಅಸ್ವಿತ್ವಕ್ಕೆ
ರಾಯಚೂರು: ತಾಲೂಕಿನ ಜಾಗೀರಮರ್ಚೆಡ್ ಗ್ರಾಮದಲ್ಲಿ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಉದ್ಘಾಟನೆ ಈಚೆಗೆ ನಡೆಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್ ಅವರು ಗ್ರಾಮ ಘಟಕವನ್ನು ನಾಡ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿ, ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿದ್ದು ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆಗೆ ಹೋರಾಡುವಂತೆ ಗ್ರಾಮ ಘಟಕದ ಪರಾಧಿಕಾರಿಗಳಿಗೆ ಸೂಚಿಸಿದರು.