ಗಡುವು ಮುಗಿದರೂ ಡಾಂಬರೀಕರಣವಿಲ್ಲ
ಸಿಂಧನೂರು: ನಗರದ ಗಾಂಧಿ ವೃತ್ತದಿಂದ ಎಪಿಎಂಸಿ ಗಂಜ್ವರೆಗಿನ ಧೂಳು ನಿಯಂತ್ರಿಸುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಡಿ.1ವರೆಗೆ ಅಧಿಕಾರಿಗಳಿಗೆ ನೀಡಿದ್ದ ಗಡುವು ಮುಗಿದಿದ್ದು, ಇನ್ನೂ ಡಾಂಬರೀಕರಣ ಆರಂಭವಾಗದಿರುವುದು ಸಮಿತಿಯ ಅಸಮಾಧಾನಕ್ಕೆ ಕಾರಣವಾಗಿದೆ. ನ.17ರಂದು ನಗರಸಭೆ ಸಭಾಂಗಣದಲ್ಲಿ ರಾಯಚೂರು ಡಿಸಿ ನಾಗರಾಜ್, ಶಾಸಕ ಹಂಪನಗೌಡ ಬಾದರ್ಲಿ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ತಾತ್ಕಾಲಿಕ ಹಕ್ಕೊತ್ತಾಯಗಳಿಗೆ ಸಮ್ಮತಿ ಸೂಚಿಸಲಾಗಿತ್ತು.