ಶಾಸಕರ ವಜಾಕ್ಕೆ ದಸಂಸ ಆಗ್ರಹ
ರಾಯಚೂರು: ನ್ಯಾ. ಸದಾಶಿವ ಆಯೋಗದ ವರದಿ ಶಿಫಾರಸಿನಂತೆ ಒಳಮೀಸಲಾತಿಗೆ ನೀಡಿಕೆಗೆ ಸಂಬಂಧಿಸಿ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅಧಿವೇಶನದಲ್ಲಿ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದೆ.
ಈ ಕುರಿತು ರಾಜ್ಯಪಾಲರಿಗೆ ಈಚೆಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿರುವ ಸಂಘಟನೆಯ ಅಧ್ಯಕ್ಷ ಬಿ.ಯೇಸು ಮತ್ತಿತರರು, ಶಾಸಕ ಮಾನಪ್ಪ ವಜ್ಜಲ್ ವರ್ತನೆಯು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ಬಗ್ಗೆ ಅರಿವಿಲ್ಲದಂತೆ ವರ್ತಿಸುವ ಶಾಸಕರು ಆ ಸ್ಥಾನದಲ್ಲಿರಲು ಅನರ್ಹರಾಗಿದ್ದು, ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಸಂಘದ ಉಪಾಧ್ಯಕ್ಷ ಬಸವರಾಜ ನಾಡಂಗಿ, ಪ್ರಧಾನ ಕಾರ್ಯದರ್ಶಿ ನರಸಿಂಹಲು ವಡವಾಟಿ, ಸಂಘಟನಾ ಕಾರ್ಯದರ್ಶಿಯಾಗಿ ಘರ್ಜನ್ ಸೇರಿ ಅನೇಕರಿದ್ದರು.