ಅಗ್ನಿ ತುಳಿದು ಭಕ್ತಿ ಸಮರ್ಪಣೆ
ಸಿಂಧನೂರು: ನಗರದ ಉಪ್ಪಾರವಾಡಿಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಕಾರ್ತಿಕ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅಗ್ನಿಕೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು.
ಕಳೆದ 88 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಒಂದು ತಿಂಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ಕೊನೆಯಲ್ಲಿ ಕಾರ್ತೀಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕೆ.ಮರಿಯಪ್ಪ, ಸಿದ್ದಪ್ಪ ಸಾಗರ, ಕಟ್ಟಿಮನಿ ಹನುಮಂತಪ್ಪ, ಹೊಗಿಬಂಡಿ ಅಯ್ಯಪ್ಪ, ಕುಡಿತಿನಿ ರಂಗಪ್ಪ, ಪ್ರಕಾಶ ಗುಡಿ, ಈರಪ್ಪ ಕಬ್ಬೇರ, ಉಮೇಶ ಗೋಮರ್ಸಿ, ಬಸವರಾಜ ಯಾದವ್, ಉಮೇಶ, ಗುರುಸಿದ್ದಯ್ಯ ತಾತ, ಹೊಸ ಉಪ್ಪಾರ ಮಹಾದೇವಪ್ಪ, ದೇವರಗುಡಿ ನಾಗಪ್ಪ, ಮರಕಲದಿನ್ನಿ ದೇವೇಂದ್ರಪ್ಪ, ಬುದ್ದಿನ್ನಿ ರಾಮಯ್ಯ, ಸಸಳ್ಳಿ ರಾಮಣ್ಣ, ಧರ್ಮರಾಜ್ ಉಪ್ಪಾರ, ಇನ್ನಿತರರು ಇದ್ದರು.