ಅಮರೇಶ್ವರರ ವಿಜೃಂಭಣೆಯ ಉತ್ಸವ
ಲಿಂಗಸ್ಗೂರು: ಸುಕ್ಷೇತ್ರ ಗುಡಗುಂಟಿ ಅಮರೇಶ್ವರ ದೇವರ ಉತ್ಸವ ಮಹೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಅಂದು ಬೆಳಗ್ಗೆ ಅಮರೇಶ್ವರ ದೇವರಿಗೆ ರುದ್ರಾಭಿಷೇಕ, ಮಹಾಮಂಗಳರಾತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸಂಜೆ ದೇವಸ್ಥಾನದ ಅರ್ಚರು ಉತ್ಸವ ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ಅಮರೇಶ್ವರ ಗುರುಅಭಿನವ ಗಜದಂಡ ಸ್ವಾಮಿಗಳು ಉತ್ಸವ ಮೂರ್ತಿಯೊಂದಿಗೆ ಉತ್ಸವದಲ್ಲಿ ಆಸೀನರಾದ ಬಳಿಕ ನೂರಾರು ಭಕ್ತರು ಉತ್ಸವ ರಥೋತ್ಸವ ಎಳೆದು ಭಕ್ತಿ ಭಾವ ಮೆರೆದರು. ಸಹಾಯಕ ಆಯುಕ್ತ ಟಿ.ಯೋಗೇಶ್, ಕಾರ್ಯದರ್ಶಿ ತಹಸೀಲ್ದಾರ್ ಮಹಾಜನ್, ಅಯ್ಯಪ್ಪಯ್ಯಸ್ವಾಮಿ ಇತರರು ಭಾಗವಹಿಸಿದ್ದರು.