ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಂ.ಬಿ. ಪಾಟೀಲ್‌ಗೆ ಶ್ರದ್ಧಾಂಜಲಿ

Lingaraj Badiger
Updated On : 10 Dec 2013, 10:45 am

ರಾಯಚೂರು: ಹಿರಿಯ ಪತ್ರಕರ್ತ, ರಂಗಕರ್ಮಿ ಎಂ.ಬಿ. ಪಾಟೀಲ್ ಅವರ ನಿಧನದ ಹಿನ್ನೆಲೆ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂತಾಪ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪತ್ರಕರ್ತರಾದ ಕೆ. ಸತ್ಯನಾರಾಯಣ, ಬಿ. ವೆಂಕಟಸಿಂಗ್, ಮೃತ್ಯುಂಜಯ ಕಪಗಲ್, ಭೀಮರಾಯ ಹದ್ದಿನಾಳ ಮಾತನಾಡಿದರು. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರಿದ್ದರು.ನ್ಯಾಯವಾದಿಗಳ ಸಂಘದಿಂದ: ಹಿರಿಯ ವಕೀಲ ಹಾಗೂ ಹಿರಿಯ ಪತ್ರಕರ್ತ ಎಂ.ಬಿ. ಪಾಟೀಲ ಅವರ ಅಕಾಲಿಕ ನಿಧನಕ್ಕೆ ರಾಯಚೂರು ನ್ಯಾಯವಾದಿಗಳ ಸಂಘದಿಂದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ವಕೀಲರಾದ ಸಿ.ಎಸ್. ರಸ್ತಾಪೂರ, ಎಚ್. ಜಗದೀಶ್, ಎಸ್. ಜಿ. ಮಠ ಮಾತನಾಡಿ ಶೋಕ ವ್ಯಕ್ತಪಡಿಸಿದರು. ಜಿಲ್ಲಾ ಸತ್ರ ನ್ಯಾಯಾಧೀಶರಾದ ಆರ್.ಜೆ. ಸತೀಶ್ ಸಿಂಗ್, ಸತ್ಯನಾರಾಯಣಾಚಾರ್ಯ ಕಾಡ್ಲೂರು, ಮಹ್ಮದ್ ಮುಜಾಹಿದ್ ಉಲ್ಲಾ, ಚೆಲುವಮೂರ್ತಿ, ಹನುಮಂತಪ್ಪ, ಕೆ.ಗೋಪಾಲಕೃಷ್ಣ, ಕೆ.ಪ್ರಭುದೇವ್, ಪ್ರಲ್ಲಾದರಾವ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement