ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್‌ನಲ್ಲಿ ನೀರಿಗೆ ಹಾಹಾಕಾರ

Mainashree
Updated On : 11 Dec 2013, 10:48 am

ಕ.ಪ್ರ.ವಾರ್ತೆ  ಮುದಗಲ್  ಡಿ. 10
ಪಟ್ಟಣಕ್ಕೆ ಕೃಷ್ಣಾ ನದಿಯಿಂದ ಕುಡಿಯಲು ನೀರು ಸರಬರಾಜು ಮಾಡುತ್ತಿದ್ದ ಪೈಪ್‌ಲೈನ್ ಒಡೆದಿದ್ದರಿಂದ ಸಾರ್ವಜನಿಕರು ಕುಡಿವ ನೀರಿಗಾಗಿ ಗಲ್ಲಿಗಲ್ಲಿ, ತೆರೆದಬಾವಿ, ಕೈ ಪಂಪ್‌ಗಳಿಗೆ ಮಾರು ಹೋಗಿದ್ದಾರೆ.
ಸತತ ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ನೀರು ಸರಬರಾಜು ಮಾಡು ರೇಜಿಂಗ್ ಪೈಪುಗಳು ಎರಡು ಕಡೆಗಳಲ್ಲಿ ಒಡೆದಿದು, ಹೆಚ್ಚಿನ ಪ್ರಮಾಣದ ನೀರು ಪೋಲಾಗುತಿತ್ತು. ಅದನ್ನು ಪಟ್ಟಣ ಪಂಚಾಯಿತಿಯವರು ದುರಸ್ತಿಗೊಳಿಸಲು ಪೈಪ್‌ಲೈನ್‌ದಲ್ಲಿರುವ ನೀರು ಖಾಲಿ ಮಾಡಿ ದುರಸ್ತಿ ಮಾಡಬೇಕಾಗಿದ್ದರಿಂದ ನೀರು ಖಾಲಿ ಮಾಡಲು ಸಮಯ ತೆಗೆದುಕೊಂಡಿದೆ ಎಂದು ನೀರು ಸರಬರಾಜು ವಿಭಾಗದ ರಂಗನಾಥ ತಿಳಿಸಿದರು.
ಇಂದು ನೀರು ಸರಬರಾಜು?: ತಾಂತ್ರಿಕ ತೊಂದರೆ ಮತ್ತು ದುರಸ್ತಿಗೊಳಿಸಲು ಸಿಬ್ಬಂದಿ ಕೊರತೆ ಇದ್ದುದರಿಂದ ವಿಳಂಬಕ್ಕೆ ಕಾರಣವಾಗಿದೆ. ಬುಧವಾರದ ವೇಳೆಗೆ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮಿ ತಿಳಿಸಿದ್ದಾರೆ.
ತೊಂದರೆ: ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ಯೋಜನೆ ಏಕಾಏಕಿ ಪೈಪ್‌ಲೈನ್ ಒಡೆದಿದ್ದರಿಂದ ಸಾರ್ವಜನಿಕರು ಕುಡಿವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಹೋಟೆಲ್, ಮತ್ತು ಮನೆಗಳ ದಿನ ಬಳಕೆಗೆ ಪರದಾಡುವಂತಾಗಿದೆ. ಇದರಿಂದಾಗಿ ಮಹಿಳೆಯರು, ಪುರುಷರು ಖಾಲಿ ಕೊಡಗಳನ್ನು ಹಿಡಿದು ದೂರದ ತೆರೆದಬಾವಿ, ಕೊಳವೆಬಾವಿಗಳಿಗೆ ಅಲೆದಾಡುತ್ತಿದ್ದಾರೆ. ಇನ್ನು ಕೆಲವರು ಹೊಸ ಕಟ್ಟಡ ಕಟ್ಟುವವರ ಬೋರವೆಲ್‌ಗಳಿಗೆ ಹೋಗಿ ನೀರು ತರುವುದು ಸಾಮಾನ್ಯವಾಗಿದೆ.
ಭಾರಿ ಬೇಡಿಕೆ: ಸತತ ಮೂರು ದಿನಗಳಿಂದ ಕುಡಿವ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ಪಟ್ಟಣದಲ್ಲಿ ಮಾರಾಟವಾಗುತ್ತಿರುವ 20 ಲೀಟರ್ ಬಿಸ್ಲೇರಿ ಕ್ಯಾನ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ದಿನಕ್ಕೆ 10ರಿಂದ 15 ಕ್ಯಾನಗಳು ಮಾತ್ರ ಖಾಲಿಯಾಗುತ್ತಿದ್ದವು. ಈಗ ಒಂದು ಅಂಗಡಿಯಿಂದ 20ರಿಂದ 40 ಕ್ಯಾನ್‌ಗಳು ಮಾರಾಟವಾಗುತ್ತಿವೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಅಧ್ಯಕ್ಷರ ಭೇಟಿ: ಪಟ್ಟಣಕ್ಕೆ ಕುಡಿವ ನೀರು ಸರಬರಾಜು ಮಾಡುವ ರೇಜಿಂಗ್ ಪೈಪ್‌ಲೈನ್ ಒಡೆದ ಸ್ಥಳಕ್ಕೆ ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಭೇಟಿ ನೀಡಿ ದುರಸ್ತಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಸಿಬ್ಬಂದಿಗೆ, ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement