ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೈದ್ಯರಿಲ್ಲದೇ ಇದ್ದರೆ ಆಸ್ಪತ್ರೆಗೆ ಬೀಗ ಹಾಕಿ

Mainashree
Updated On : 11 Dec 2013, 10:48 am

ಕ.ಪ್ರ.ವಾರ್ತೆ  ಸಿಂಧನೂರು  ಡಿ. 10
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಕುರಿತು ತೀವ್ರ ಚರ್ಚೆ ನಡೆಯಿತು.
ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯ ವೆಂಕೋಬ ಸಾಸಲಮರಿ ಅವರು ವೈದ್ಯರು ಇಲ್ಲದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ ಎಂದು ಆಕ್ರೋಶದಿಂದ ಸಲಹೆ ನೀಡಿದರು.
ತಾಲೂಕಿನ ಸಾಲಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಮೂರುದಿನ ಮಾತ್ರ ವೈದ್ಯರು ಬರುತ್ತಾರೆ. ಇನ್ನುಳಿದ ಮೂರು ದಿನ ಹೆರಿಗೆ ಮತ್ತಿತರ ತುರ್ತು ಚಿಕಿತ್ಸೆಗೆ ಬರುವ ರೋಗಿಗಳ ಪಾಡೇನು ಎಂದು ಸಾಲಗುಂದಾ ಕ್ಷೇತ್ರದ ಸದಸ್ಯೆ ಪ್ರಶ್ನಿಸಿದರು. ಕಾಯಂ ವೈದ್ಯರಿಲ್ಲದೇ ಇರುವುದರಿಂದ ಎರವಲು ಸೇವೆ ಕೊಡಲಾಗಿದೆ ಎಂದು ಈಶ್ವರ ದಾಸಪ್ಪನವರ್ ಸಮಜಾಯಿಷಿ ನೀಡಿದರು.
ವೈದ್ಯರಿಲ್ಲ ಎಂಬ ಸಿದ್ಧ ಉತ್ತರ: ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸದಸ್ಯ ಚಂದ್ರುಭೂಪಾಲ ನಾಡಗೌಡ ಸರ್ಕಾರಿ ಆಸ್ಪತ್ರೆಗೆ ಫೋನ್ ಮಾಡಿದರೆ ಯಾವಾಗಲೂ ಡಾಕ್ಟರ್ ಇಲ್ಲವೆಂದು ಉತ್ತರಿಸುತ್ತಾರೆ. ಮೂರ್ನಾಲ್ಕು ಜನರನ್ನು ತಾತ್ಕಾಲಿಕವಾಗಿ ಸೇವೆಗೆ ಪಡೆದಿದ್ದು, ಅವರೆಲ್ಲರೂ ಎಲ್ಲಿ ಹೋಗುತ್ತಾರೆಂದು ಪ್ರಶ್ನಿಸಿದರು.
ಅಧ್ಯಕ್ಷತೆಯನ್ನು ಬಸಮ್ಮ ಕೊಟ್ರಪ್ಪ ವಹಿಸಿದ್ದರು. ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಬಿಇಒ ಅಮರಪ್ಪ ಭೋವಿ, ಸಮಾಜ ಕಲ್ಯಾಣ ಇಲಾಖೆಯ ರಮೇಶ, ಜೆಸ್ಕಾಂನ ರಮೇಶ ದೇಸಾಯಿ, ಜಲ ಸಂಪನ್ಮೂಲ ಇಲಾಖೆಯ ನಾಗಪ್ಪ, ತೋಟಗಾರಿಕೆ ಇಲಾಖೆಯ ರಾಜಶೇಖರ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement