ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಶಹರ್ ರೋಜಗಾರ್‌'ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Mainashree
Updated On : 11 Dec 2013, 10:51 am

ಸಿಂಧನೂರು: ನಗರಸಭೆ ವ್ಯಾಪ್ತಿಯ ಸ್ವರ್ಣ ಜಯಂತಿ ಶಹರ್ ರೋಜಗಾರ್ ಯೋಜನೆ (ಎಸ್‌ಜೆಎಸ್‌ಆರ್‌ವೈ)ಅಧ್ಯಕ್ಷರಾಗಿ ಶ್ರೀದೇವಿ ಶ್ರೀನಿವಾಸ, ಉಪಾಧ್ಯಕ್ಷರಾಗಿ ಅನುಸುಯಾ ಅಮರಗುಂಡಪ್ಪ ಗಸ್ತಿ ಆಯ್ಕೆಯಾದರು.
ಮಂಗಳವಾರ ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶ್ರೀದೇವಿ ಶ್ರೀನಿವಾಸ ಅವಿರೋಧವಾಗಿ ಆಯ್ಕೆಯಾದರು.
ಬಿಎಸ್ಸಾರ್ ಕಾಂಗ್ರೆಸ್, ಕೆಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲಿತ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅನುಸೂಯಾ ಇವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ಪೌರಾಯುಕ್ತ ನಾಸೀರ ಅಲಿ ಹೇಳಿದರು.
ನಗರಸಭಾಧ್ಯಕ್ಷ ಜಾಫರ ಜಾಗೀರದಾರ, ಉಪಾಧ್ಯಕ್ಷೆ ಲಕ್ಷ್ಮೀ ರಮೇಶ, ಸದಸ್ಯರಾದ ಕೆ. ಮರಿಯಪ್ಪ, ಬಸವರಾಜ ನಾಡಗೌಡ, ಚಂದ್ರಶೇಖರ ಮೈಲಾರ, ಸಣ್ಣ ವೀರಭದ್ರಪ್ಪ ಕುರಕುಂದಿ, ಶರಣಬಸವ ಗೊರೇಬಾಳ, ಲಿಂಗರಾಜ ಗೊರೇಬಾಳ, ಸುಮಂಗಲಾ ಮಲ್ಲಿಕಾರ್ಜುನಗೌಡ ಗುಂಜಳ್ಳಿ, ಶೇಖರಪ್ಪ ಗಿಣಿವಾರ, ಮಹಿಬೂಬ, ಶಬ್ಬೀರ, ಪ್ರಭುರಾಜ, ಮಹ್ಮದ್, ಮಲ್ಲಿಕಾರ್ಜುನ ಪಾಟೀಲ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement