ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾವಯವ ಕೃಷಿ, ಬದುಕಿಗೆ ಖುಷಿ

Mainashree
Updated On : 11 Dec 2013, 10:48 am

ಸಿಂಧನೂರು: ಕ್ರಿಮಿನಾಶಕ ಬಳಸಿ ಕೃಷಿ ಕೈಗೊಂಡರೆ ಆನಾರೋಗ್ಯ ಗ್ಯಾರಂಟಿ. ಸಾವಯವ ಕೃಷಿ ಬದುಕಿಗೆ ಖುಷಿ ನೀಡುತ್ತದೆ ಎಂದು ಪ್ರಗತಿಪರ ರೈತ ಮುಕ್ಕುಂದಿ ಮುದೇಗೌಡ್ರು ಅಭಿಪ್ರಾಯಪಟ್ಟರು.
ಸರ್ಕಾರಿ ಪಪೂ ಕಾಲೇಜು ಅಂಬಾಮಠ ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಆಧುನಿಕ ಕೃಷಿಯಿಂದ ಹೆಚ್ಚು ಬೆಳೆ ಬೆಳೆಯಬಹುದು. ಆದರೆ ಅದನ್ನೇ ನಾವು ಪ್ರತಿನಿತ್ಯ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಮನುಷ್ಯನ ಸರಾಸರಿ ಜೀವಿತಾವಧಿ ಕಡಿಮೆಯಾಗುತ್ತದೆ. ಆದ್ದರಿಂದ ನಾವು ಸಾವಯವ ಕೃಷಿಯ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ನಾರಾಯಣರೆಡ್ಡಿ ವಹಿಸಿದ್ದರು. ಅಲ್ಲಾಭಕ್ಷಿ ಹುಡಾ, ಜಿಲಾನಿಸಾಬ್, ಮಹಿಬೂದ್ ಹುಸೇನ್‌ಸಾಬ್, ಸಂತೋಷಕುಮಾರ, ಶಿಬಿರಾಧಿಕಾರಿ ನಾಗಭೂಷಣ ಟಿ.ಇನ್ನಿತರರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ರಿಯಾನ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕೆ.ಪಿ. ರಾಘವೇಂದ್ರ ಸ್ವಾಗತಿಸಿದರು. ನಿಂಗಮ್ಮ ನಿರೂಪಿಸಿದರು. ಜಯಲಕ್ಷ್ಮಿ ವಂದಿಸಿದರು. ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement