ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುದ್ದಿ ಸಂಕ್ಷೇಪ

Mainashree
Updated On : 11 Dec 2013, 10:52 am

ಇಂದಿನಿಂದ  ಪೊಲೀಸ್ ಕ್ರೀಡಾಕೂಟ
ರಾಯಚೂರು: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಡಿ.11ರಿಂದ 13ರವರೆಗೆ ನಗರದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಡಿ. 11ರಂದು ಬೆಳಗ್ಗೆ 8ಕ್ಕೆ ಪೊಲೀಸ್ ಕವಾಯತು ಮೈದಾನದಲ್ಲಿ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಲಿದ್ದಾರೆ. ಎಸ್ಪಿ ಎಂ.ಎನ್.ನಾಗರಾಜ್ ಪಾಲ್ಗೊಳ್ಳಲಿದ್ದಾರೆ. ಡಿ. 13ರಂದು ಸಂಜೆ 4ಕ್ಕೆ ಕ್ರೀಡಾಕೂಟದ ಸಮಾರೋಪ ನಡೆಯಲಿದ್ದು, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮಹಮ್ಮದ್ ವಜೀರ್ ಅಹಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಇಂದು ಸಾಂಸ್ಕೃತಿಕ ಬಳಗ ಉದ್ಘಾಟನೆ
ಮಸ್ಕಿ: ಪಟ್ಟಣದ ನೀಲತಾರಾ ಆರ್ಕೆಡ್ ಆವರಣದಲ್ಲಿ ಡಿ. 11ರಂದು ಶಿಕ್ಷಕ ಷಡಕ್ಷರಪ್ಪ ಸಾಂಸ್ಕೃತಿಕ ಬಳಗದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಸಂಜೆ 6ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಶಾಸಕ ಪ್ರತಾಪಗೌಡ ಪಾಟೀಲ್ ವಹಿಸುವರು. ಅತಿಥಿಗಳಾಗಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಎಂಲ್ಸಿ ಮನೋಹರ ಮಸ್ಕಿ, ಜಿಪಂ ಸಿಇಒ ಡಾ.ಮುದ್ದುಮೋಹನ್, ಡಾ. ಶಿವಶರಣಪ್ಪ ಇತ್ಲಿ, ಜಿಪಂ ಸದಸ್ಯ ಮಹಾದೇವಪ್ಪಗೌಡ, ಎಚ್.ಬಿ. ಮುರಾರಿ, ಗ್ರಾಪಂ ಅಧ್ಯಕ್ಷ ಎಂ.ಅಮರೇಶ, ತಾಪಂ ಸದಸ್ಯರಾದ ಹನುಮಂತಪ್ಪ ಮೋಚಿ, ನೀಲಮ್ಮ ಬಸವರಾಜ ಮರಳದ, ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ, ಶಿಕ್ಷಕ ಷಡಕ್ಷರಪ್ಪ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಮಂಜುನಾಥ ಬಿಜ್ಜಳ್ ಪಾಲ್ಗೊಳ್ಳಲಿದ್ದಾರೆ. ಆಶಯ ನುಡಿ ಗುಲ್ಬರ್ಗಾದ ಸಾಹಿತಿ ಡಾ. ಸ್ವಾಮಿರಾವ್ ಕುಲ್ಕರ್ಣಿ ನುಡಿಯಲಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ರಾಯಚೂರು: ಪವರ್‌ಗ್ರೇಡ್ ಕಾರ್ಪೋರೇಷನ್ ಆಫ್ ಇಂಡಿಯಾದ 765 ಕೆವಿ ವಿತರಣಾ ಮಾರ್ಗದ ಗೋಪುರ ಅಳವಡಿಕೆ ಹಿನ್ನೆಲೆ ಡಿ.11ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಗೋಪುರ ಅಳವಡಿಕೆ ಕಾಮಗಾರಿ ಹಿನ್ನೆಲೆ ಡಿ.11ರಂದು ಬಳಗ್ಗೆ 8ರಿಂದ ಸಂಜೆ 7ರವರೆಗೆ ದೇವದುರ್ಗ ತಾಲೂಕಿನ ಆಲ್ಕೋಡ್ ಹಾಗೂ ಗಲಗ ಗ್ರಾಮದ ಸುತ್ತಮುತ್ತಲಿನ ಪ್ರದೇಶ, ರಾಯಚೂರು ತಾಲೂಕಿನ ಯರಗೇರಾ, ಮಟಮಾರಿ, ಗಿಲ್ಗೆಸ್ಗೂರು, ಮಲಿಯಾಬಾದ್ ಹಾಗೂ ವಡವಟ್ಟಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಮಾನವಿ ತಾಲೂಕಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement