ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹದಗೆಟ್ಟ ರಸ್ತೆ; ಸಂಚಾರಕ್ಕೆ ಸಂಚಕಾರ

Mainashree
Updated On : 11 Dec 2013, 10:49 am

ರಾಯಚೂರು: ನಗರದ ಸ್ಟೇಷನ್ ರಸ್ತೆಯಿಂದ ಮಾವಿನಕೆರೆಯ ಮೂಲಕ ಸಾಗುವ ರಸ್ತೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ರಸ್ತೆ ದುರಸ್ತಿ ಹೆಸರಿನಲ್ಲಿ ರಸ್ತೆಯಲ್ಲಿ ಕಲ್ಲುಗಳನ್ನು ಆಡಳಿತ ಸುರಿದಿದೆ. ಆದರೆ ಡಾಂಬರು ಹಾಕದಿರುವುದರಿಂದ ವಾಹನ ಸವಾರರಿಗೆ ಸಂಚಾರಕ್ಕೆ ಸಂಚಕಾರ ಬಂದಿದೆ.
ಮಾವಿನಕೆರೆಯ ಏರಿ ಮೇಲೆ ಸಾಗುವ ರಸ್ತೆಯ ಪಾತಾಳ ಆಂಜನೇಯ ದೇವಸ್ಥಾನದ ಬಳಿ ಹಾಗೂ ಅಶೋಕ ಡಿಪೋ ರಸ್ತೆಯ ಕಸಾಯಿಖಾನೆ ಬಳಿ ಸ್ಥಳೀಯ ಆಡಳಿತ ತಗ್ಗು ಬಿದ್ದಿದ್ದ ರಸ್ತೆಯಲ್ಲಿನ ತಗ್ಗು ಮುಚ್ಚುವ ಹೆಸರಿನಲ್ಲಿ ಕಲ್ಲು ತಂದು ಸುರಿದಿದೆ. ಕಲ್ಲಿನ ಮೇಲೆ ಮರಂ ಹಾಕಿ ಕೈಬಿಟ್ಟಿರುವ ಆಡಳಿತದ ಅರ್ಧಮರ್ಧ ಕಾರ್ಯದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲರೂ ನಗರಾಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ಸಾಗುವಂತಾಗಿದೆ.
ಕಾಮಗಾರಿ ವಹಿಸಿಕೊಂಡವರು ರಸ್ತೆಯಲ್ಲಿ ಕಲ್ಲು ಹಾಕಿ ಮರಂ ಚೆಲ್ಲಿದ್ದರಿಂದ ಮರಂ ಕಿತ್ತುಹೋಗಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸಿದಂತೆಲ್ಲ ಕಿತ್ತು ದಾರಿಹೋಕರಿಗೆ ಬಡಿದು ಅನೇಕರು ಗಾಯಗೊಂಡಿದ್ದಾರೆ. ಅದರಲ್ಲೂ ಕಸಾಯಿ ಖಾನೆ ಬಳಿಯಂತೂ ಕಲ್ಲುಗಳು ಕಿತ್ತು ಚೆಲ್ಲಾಪಿಲ್ಲಿಯಾಗಿದ್ದು, ಸುತ್ತಲಿನ ನಿವಾಸಿಗಳು ವಾಹನಗಳ ರಭಸಕ್ಕೆ ರಸ್ತೆಯಿಂದ ಕಿತ್ತು ಸಿಡಿಯುವ ಕಲ್ಲುಗಳಿಂ ದಾಗಿ ಆತಂಕಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ನಗರಸಭೆ ಗಮನಹರಿಸಿ ಈ ರಸ್ತೆಗೆ ಡಾಂಬರು ಸುರಿದು ದುರಸ್ತಿಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement