ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉತ್ತಮ ನಾಗರಿಕರಾಗಲು ಸೇವಾ ಮನೋಭಾವ ಅವಶ್ಯ

Lingaraj Badiger
Updated On : 12 Dec 2013, 11:00 am

ಕ.ಪ್ರ.ವಾರ್ತೆ, ಸಿಂಧನೂರು, ಡಿ. 11
ವಿದ್ಯಾರ್ಥಿ ದೆಸೆಯಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಇಂದಿರಮ್ಮ ಮಲ್ಲನಗೌಡ ಹೇಳಿದರು
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಪುನರ್ವಸತಿ ಕೇಂದ್ರ ಅರಗಿನಮರ ಕ್ಯಾಂಪ್‌ನಲ್ಲಿ ಹಮ್ಮಿಕೊಂಡಿರುವ 2013-14 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಿ.ಎಚ್. ಕಂಬಳಿ, ಸಮಾಜಕ್ಕೆ ತಾವು ಸಲ್ಲಿಸಿದ ಯಾವುದೇ ಸೇವೆಗೆ ಪ್ರತಿಫಲ ಅಪೇಕ್ಷಿಸದೆ ಕಾರ್ಯನಿರ್ವಹಿಸಬೇಕು. ಗ್ರಾಮಗಳ ಅಭಿವೃದ್ಧಿಗೆ ಮೀಸಲಾಗಿರುವ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಶ್ರಮಿಸಬೇಕೆಂದು ಶಿಬಿರಾರ್ಥಿಗಳಿಗೆ ಸಲಹೆ  ನೀಡಿದರು.
ಕ.ರಾ.ಸ. ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಧ್ವಜಾರೋಹಣ ನೆರವೇರಿಸಿ ಕಾಲೇಜಿನ ಎನ್ನೆಸ್ಸೆಸ್ ಘಟಕವು ಹಮ್ಮಿಕೊಳ್ಳುವ ವಿಶಿಷ್ಟ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಚಾರ್ಯ ಶರಣಯ್ಯ ಕೆ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಎನ್ನೆಸ್ಸೆಸ್ ಅಧಿಕಾರಿ ಜಗದೀಶ ಓತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಸದಸ್ಯರಾದ ಬಸವರಾಜ ಕೋಟೆ, ರಾಮಲಿಂಗರಡ್ಡಿ, ಮುಖಂಡರಾದ ಮಲ್ಲನಗೌಡ, ವೆಂಕಟರಾಮರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಎಲ್ಲ ತಂಡದ ನಾಯಕರು ಎನ್ನೆಸ್ಸೆಸ್ ಗೀತೆಯನ್ನು ಹಾಡಿದರು. ಉಪನ್ಯಾಸಕರಾದ ಅನ್ವರ್ ಖುದ್ದು ಸ್ವಾಗತಿಸಿದರು. ಉಪನ್ಯಾಸಕ  ವಿರುಪನಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಬಸಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement