ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೆರೂರ್‌ಗೆ ಶ್ರದ್ಧಾಂಜಲಿ

Lingaraj Badiger
Updated On : 12 Dec 2013, 11:01 am

ಸಿಂಧನೂರು: ಗಂಗಾಮತ ಸಮಾಜ, ನೌಕರರ ಟ್ರಸ್ಟ್‌ನಿಂದ ಮಾಜಿ ಮುಖ್ಯ ಸಚೇತಕ ಹಾಗೂ ಕೋಲಿ ಸಮಾಜದ ರಾಜ್ಯಮುಖಂಡ ವಿಠಲ್ ಹೆರೂರ್ ಅವರ ಅಕಾಲಿಕ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ವಿಠಲ್‌ಹೆರೂರ್ ಹುಟ್ಟು ಹೋರಾಟಗಾರರು. ಅವರು ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪನೆ ರೂವಾರಿಗಳಾಗಿದ್ದರು. ಗಂಗಾಮತ ಸಮಾಜದ ಅಭಿವೃದ್ಧಿಗೆ ರಾಜ್ಯಮಟ್ಟದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದರು ಎಂದು ತಾಲೂಕ ಗಂಗಾಮತ ಸಮಾಜದ ಅಧ್ಯಕ್ಷ ಬಿ.ಕೋಮಾರಪ್ಪ ಜವಳಗೇರಾ ಸ್ಮರಿಸಿದರು. ಸಭೆಯಲ್ಲಿ ಮುಖಂಡರಾದ ವೈ.ಎಚ್. ರಕ್ಕಸಗಿ, ಕೆ. ಬಾಳಪ್ಪ, ಮಂಜುನಾಥ ಸೋಮಲಾಪುರ, ಮಲ್ಲಪ್ಪ ಹಂಚಿ, ವೀರೇಶ ಬೂದಗುಂಪಾ, ನರಸಪ್ಪ ಸಿಎಂಸಿ ಬಸವರಾಜ ಎಪಿಎಂಸಿ, ಪರಶುರಾಮ, ಪ್ರಶಾಂತ, ರಾಮಣ್ಣ, ಹನುಮಂತಪ್ಪ ತ್ಯಾಪಿಗುಂಡಿ, ದೇವಪ್ಪ ಬುಕನಟ್ಟಿ, ಯಂಕೋಬಾ ಗೋಮರ್ಸಿ, ವೀರೇಶ ಮಹಿಬೂಬ ಕಾಲೋನಿ, ಅಮರೇಶ ಫೋಟೋ ಸ್ಟೂಡಿಯೋ, ಬಸಪ್ಪ ಕಡಕಲ್ ಮತ್ತಿತರರು ಇದ್ದರು.
ಭೀಮನಗೌಡ 4ನೇ ರ್ಯಾಂಕ್
ಲಿಂಗಸ್ಗೂರು: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಮಹಾಂತಮ್ಮ ಲಿಂಗನಗೌಡ ಬಯ್ಯಾಪುರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಭೀಮನಗೌಡ ನಾಗನಗೌಡ ಜೂನ್ 2013ರಲ್ಲಿ ನಡೆದ ಬಿಎ ಪದವಿಯ 6 ಸೆಮಿಸ್ಟರ್‌ಗಳಲ್ಲಿ 3,500 ಅಂಕಗಳಿಗೆ 2,669(ಶೇ 84.82) ಅಂಕ ಪಡೆದು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 4ನೇ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಸಂಘದ ಅಧ್ಯಕ್ಷ ಅಮರೇಗೌಡ ಮಟ್ಟೂರ ಹಾಗೂ ಆಡಳಿತಾಧಿಕಾರಿ ಬಸವಂತರಾಯ ಕುರಿ, ಪ್ರಾಚಾರ್ಯ ಎಚ್.ಎಲ್. ಪವಾರ್ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಕಳ್ಳನ ಬಂಧನ
ರಾಯಚೂರು: ನಗರ ಸದರ್ ಬಜಾರ್ ಠಾಣೆಯ ಪೊಲೀಸರು ಬೈಕ್ ಕಳ್ಳನೊಬ್ಬನನ್ನು ಬಂಧಿಸಿ ಅವನಿಂದ ಐದು ಬೈಕ್ ಜಪ್ತಿ ಮಾಡಿದ್ದಾರೆ. ಬಂಧಿತನನ್ನು ನಗರದ ತಿಮ್ಮಾಪೂರ ಪೇಟೆಯ ಜಿ.ಡಿ. ತೋಟ ಪ್ರದೇಶದ ನಿವಾಸಿ ವೀರೇಶ್(26) ಎಂದು ಗುರುತಿಸಲಾಗಿದೆ. ಈತನಿಂದ 1.50ಲಕ್ಷ ಮೌಲ್ಯದ ಐದು ವಿವಿಧ ಕಂಪನಿಗಳ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೇಸ್ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement