ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಧ್ಯಾತ್ಮದ ಒಲವಿನಿಂದ ಗುರಿ ಸಾಧನೆ

Rashmi Kasaragodu
Updated On : 13 Dec 2013, 11:28 am

ಸೇಡಂ: ಪ್ರತಿಯೊಬ್ಬರೂ ಅಧ್ಯಾತ್ಮದತ್ತ ಒಲವು ತೋರಿದರೆ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯವು ಅಧ್ಯಾತ್ಮ ಮತ್ತು ಸಂಸ್ಕೃತಿಯನ್ನು ವಿಶ್ವದಾದ್ಯಂತ ಸಾರುತ್ತಾ, ಜನರನ್ನು ನೆಮ್ಮದಿಯತ್ತ ಒಯ್ಯುವ ಕಾರ್ಯ ಮಾಡುತ್ತಿದೆ. ಅವರ ಪ್ರತಿಯೊಂದು ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ ಅವರು, ಜಿಐಟಿ ಸೆಂಟರ್ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಆರೋಗ್ಯದಿಂದ ಭಾಗ್ಯ: ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿ, ಹಲವು ಜನರು ಕೆಲಸದ ಹಿಂದೆ ಬಿದ್ದು, ಆರೋಗ್ಯದತ್ತ ಗಮನಹರಿಸದೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಅಬೂ ಪರ್ವತದ ವೃದ್ಧರೋಗ ಚಿಕಿತ್ಸಕ ಹಾಗೂ ಲೇಖಕ ಡಾ. ಮಹೇಶ ಹೇಮಾದ್ರಿ ತಮ್ಮ ಉಪನ್ಯಾಸದಲ್ಲಿ, ವೃದ್ಧಾಪ್ಯದಲ್ಲಿ ಸ್ವಾಸ್ಥ್ಯ ಜಾಗೃತಿ ಅವಶ್ಯ.
 ವೃದ್ಧಾಪ್ಯವೆಂಬುದು ಹೊಸ ಜೀವನಕ್ಕೆ ಸ್ಫೂರ್ತಿಯಿದ್ದಂತೆ, ಈ ಸಮಯದಲ್ಲಿ ವೃದ್ಧರು ಏಕಾಂತದಲ್ಲಿ ಜೀವಿಸದೆ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಕ್ರಮಗಳನ್ನು ಅನುಸರಿಸಬೇಕೆಂದು ಪವರ್ ಪಾಯಿಂಟ್ ಪ್ರಜೆಂಟೇಶನ್ ಮೂಲಕ ವಿವರಿಸಿದರು.
ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಗುಲ್ಬರ್ಗ ಎಸ್ಬಿಎಚ್ ವಲಯ ಉಪ ಮಹಾ ಪ್ರಬಂಧಕರ ಎಲ್.ವಿ. ರವೀಂದ್ರಕುಮಾರ್ ಮಾತನಾಡಿದರು.
 ಶಹಾಬಾದ್ ಬ್ರಹ್ಮಕುಮಾರಿಸ್ನ ವಿಭಾಗೀಯ ನಿರ್ದೇಶಕಿ ರಾಜಯೋಗಿನಿ ರತ್ನಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಗೀತ ಕಾರ್ಯಕ್ರಮ: ಶಾರದಾ ಸಂಗೀತ ಪಾಠ ಶಾಲೆ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂಜನಾ ಭೋವಿ ಹಾರ್ಮೋನಿಯಂ ನುಡಿಸಿದರು.
 ದೇವರಾಜ ಭೋವಿ ತಬಲಾ ಸಾಥ್ ನೀಡಿದರು. ಭಾಗ್ಯಲಕ್ಷ್ಮೀ ಹಣೆಗೆ ಕುಂಕುಮವಿಟ್ಟು ಅತಿಥಿಗಳನ್ನು ಸ್ವಾಗತಿಸಿದರು. ಕಲಾವತಿ ಪರಿಚಯಿಸಿ, ಸ್ವಾಗತಿಸಿದರು. ಶ್ರೇಯಾ ಸ್ವಾಗತ ನಾಟ್ಯ ಮಾಡಿದರು.
ಬೀದರ ಫಿಜಿಯೋಥೆರಪಿಸ್ಟ್ ಬಿ.ಕೆ. ಡಾ. ಭರಮಶೆಟ್ಟಿ ವ್ಯಾಯಾಮಗಳನ್ನು ಕಲಿಸಿಕೊಟ್ಟರು.
 ಈ ವೇಳೆ ವ್ಯಾಯಾಮಗಳನ್ನು ಅನುಸರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕೆಲ ಹೊತ್ತು ತಮ್ಮನ್ನು ತಾವು ಮರೆತು ವ್ಯಾಯಾಮ ಮಾಡುವಲ್ಲಿ ತೊಡಗಿದ್ದು ವಿಶೇಷವಾಗಿತ್ತು.
 ಅವರಿಗೆ ಸದಾಶಿವ ಸ್ವಾಮೀಜಿ ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement