ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಲೋಪತಿಗೆ ಅನುಮತಿ ಬೇಡ

Rashmi Kasaragodu
Updated On : 13 Dec 2013, 11:24 am

ರಾಯಚೂರು: ಆಯುಷ್ ಮತ್ತಿತರೆ ವೈದ್ಯಕೀಯ ಪದ್ಧತಿಗಳಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಅಲೋಪಥಿ ಔಷಧಿ ನೀಡಿಕೆಗೆ ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದನ್ನು ಭಾರತೀಯ ವೈದ್ಯಕೀಯ ಸಂಘ ವಿರೋಧಿಸಿದೆ.
 ಈ ಕುರಿತು ಗುರುವಾರ ನಗರದಲ್ಲಿ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಅಲೋಪಥಿ ಔಷಧಗಳ ನೀಡಿಕೆಗೆ ಅನುಮತಿಸುವಂತೆ ಈಚಿನ ದಿನಗಳಲ್ಲಿ ಆಯುಷ್ ಮತ್ತಿತರೆ ವೈದ್ಯಕೀಯ ಪದ್ಧತಿಯಡಿ ಸೇವೆ ಸಲ್ಲಿಸುತ್ತಿರುವವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಆದರೆ ಅಲೋಪಥಿ ಔಷಧಗಳನ್ನು ಆಯುಷ್ ವೈದ್ಯರು ಮತ್ತಿತರರು ರೋಗಿಗಳಿಗೆ ನೀಡಲು ಅನುಮತಿ ನೀಡಿದಲ್ಲಿ ರೋಗಿಗಳ ಆರೋಗ್ಯಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟಿನ ಆದೇಶಾನುಸಾರ ಐಎಂಎ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.ಐಎಂಎ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ಸಿ.ಎನ್. ಕುಲಕರ್ಣಿ, ಕಾರ್ಯದರ್ಶಿ ಡಾ. ರಾಜೇಶ್ ಕಕ್ಕೇರಿ, ಡಾ. ವಿ.ಎ. ಮಾಲಿಪಾಟೀಲ್, ಡಾ. ಶೈಲೇಶ್ ಅಮರಖೇಡ್, ಡಾ. ಸುರೇಶ್ ಸಗರದ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement