ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಶ್ರದ್ಧಾಂಜಲಿ

Rashmi Kasaragodu
Updated On : 13 Dec 2013, 11:27 am

ಅಫಜಲ್ಪುರ: ರಾಜ್ಯ ಕೋಲಿ ಸಮಾಜದ ಧುರೀಣ, ಮಾಜಿ ಎಂಎಲ್ಸಿ ದಿ. ವಿಠ್ಠಲ್ ಹೇರೂರ್ ಅವರ ವೈಕುಂಠ ಸಮಾರಾಧನೆ ಡಿ.13ರಂದು ನಡೆಯಲಿದೆ ಎಂದು ತಾಲೂಕು ಕೋಲಿ ಸಮಾಜದ ಉಪಾಧ್ಯಕ್ಷ ಶಂಕು ಮ್ಯಾಕೇರಿ, ಕಾರ್ಯದರ್ಶಿ ಮಲ್ಕಣ್ಣ ಯಂಕಂಚಿ, ಶಿವುಕುಮಾರ್ ನಾಟಿಕಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ದೇವಲ ಗಾಣಗಾಪುರದ ತಿಪ್ಪಣ್ಣ ಕಂಠೆಪ್ಪ ಹೇರೂರ ಪ್ರೌಢಶಾಲೆಯ ಆವರಣದಲ್ಲಿ ವೈಕುಂಠ ಸಮಾರಾಧನೆ ನಡೆಯಲಿದೆ ಎಂದರು.
ತಾಲೂಕಿನ ಸಮಸ್ತ ಕೋಲಿ ಬಂಧುಗಳು ಮತ್ತು ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಸ್ವಾಮಿಗಳು ಚೌಡದಾನಪುರ ಹಾವೇರಿ ಜಿಲ್ಲೆ ಇವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು. ಸುರೇಶ ಕಲ್ಲೂರ, ರಮೇಶ ಇಂಗಳಿಗೆ, ಬಸವರಾಜ ಜಮಾದಾರ, ಶ್ರೀಕಾಂತ ದಿವಾನಜಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement