ಎಸ್ಟಿ ಆಗುವವರೆಗೆ ಹೋರಾಟ
ಚಿತ್ತಾಪುರ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆ ಮಾಡುವವರೆಗೂ ಹೋರಾಟ ಮಾಡಲಾಗುವುದು ಎಂದು ಸಮಾಜ ಮುಖಂಡರು ತೀರ್ಮಾನಿಸಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಭಾಂಗಣದಲ್ಲಿ ತಾಲೂಕು ಕೋಲಿ ಸಮಾಜ ಹಮ್ಮಿಕೊಂಡ ಮಾಜಿ ಸಚೇತಕ ದಿ. ವಿಠ್ಠಲ್ ಹೆರೂರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಭೆಯಲ್ಲಿ ಮುಖಂಡರು ಮಾತನಾಡಿ, ಹೆರೂರ್ ಹಾಕಿ ಕೊಟ್ಟ ಮಾರ್ಗದಲ್ಲಿ ಹೋರಾಟ ಮುನ್ನಡೆದು ಸಮಾಜ ಎಸ್ಟಿಗೆ ಸೇರ್ಪಡೆಯಾಗುವವರೆಗೆ ಚಿತ್ತಾಪುರದಿಂದ ಹೋರಾಟ ಮುಂದುವರೆಸಲಾಗುವುದು ಎಂದರು. ಕೋಲಿ ಸಮಾಜ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಮುಖಂಡರಾದ ಭೀಮಣ್ಣ ಸಾಲಿ, ಬಸವರಾಜ ಚಿಮ್ಮನಳ್ಳಿ, ಅಣ್ಣಾರಾವ ಸಣ್ಣೂರಕರ್, ತಮ್ಮಣ್ಣ ಡಿಗ್ಗಿ, ರಾಮಲಿಂಗ ಬಾನರ್, ಶರಣಪ್ಪ ನಾಟಿಕರ್, ಕರ್ಣಕುಮಾರ್ ಅಲ್ಲೂರ್, ಹಣಮಂತ ರಾಮತೀರ್ಥ, ಕಾಶಿನಾಥ ಗುತ್ತೇದಾರ ಮಾತನಾಡಿ, ಗುಲ್ಬರ್ಗ ಹಾಗೂ ಚಿತ್ತಾಪುರದಲ್ಲಿ ವಿಠ್ಠಲ್ ಹೆರೂರ್ ಪುತ್ಥಳಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.