ಕಾನೂನು ಜ್ಞಾನದಿಂದ ಮಾನವ ಹಕ್ಕು ಸಂರಕ್ಷಣೆ
ಗುಲ್ಬರ್ಗ: ಎಲ್ಲರಿಗೂ ಕಾನೂನಿನ ಜ್ಞಾನ ಲಭಿಸಿದಾಗ ಮಾನವ ಹಕ್ಕುಗಳ ಸಂರಕ್ಷಣೆ ಆಗುತ್ತದೆ ಎಂದು ಇನಾಮದಾರ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಾಚಾರ್ಯರರಾದ ಡಾ. ಬ.ಸಿ. ಗುಳಶೆಟ್ಟಿ ಹೇಳಿದರು.
ನಗರದ ದರ್ಪಣ ಕೌಶಲ್ಯ ತರಬೇತಿ ಕೇಂದ್ರದಲ್ಲಿ ದರ್ಪಣ (ನಮ್ಮೊಳಗಿನ ನಿಮಗಾಗಿ) ಸಂಸ್ಥೆ ಮತ್ತು ಕಿರಣ ರೂರಲ್ ರಿಕನ್ಸಟ್ರಕ್ಷನ್ ಸೊಸಾಯಿಟಿ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕು ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಕ್ಷೇತ್ರಾಧಿಕಾರಿ ಸೂರ್ಯಕಾಂತ ಎಂ.ಕೆ. ಹಾಗೂ ಕೆಆರ್ಆರ್ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ. ಶಿರಹಟ್ಟಿ ಅವರು ಮಾನವ ಹಕ್ಕು ಕುರಿತು ಮಾತನಾಡಿದರು.
ಸಮಾಜ ಕಾರ್ಯ ಅಧ್ಯಯನದ ಅಂಬಿಕಾ, ರಾಜಪ್ಪ, ರವಿಚಂದ್ರ, ಸಂಜೀವಪ್ಪ. ಎನ್, ಶಶಿಕಾಂತ, ಲಾಲ್ಹಮ್ಮದ್, ಕಲ್ಪನಾ, ರಾಣಪ್ಪ ಅವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರವಿ ಸಿಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಹೇಶಕುಮಾರ್ ಮಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಮಾರ ಅಳ್ಳೊಳಿ ಸ್ವಾಗತಿಸಿದರು. ಪದ್ಮಾವತಿ ಕಿಂದ್ರೆ ನಿರೂಪಿಸಿದರು. ರಾಜೇಶ ವಂದಿಸಿದರು.