ಕೆನರಾ ಬ್ಯಾಂಕ್ ಗ್ರಾಹಕರ ಸಭೆ
ಗುಲ್ಬರ್ಗ/ಶಹಾಬಾದ್: ನಗರದ ಕೆನರಾ ಬ್ಯಾಂಕ್ ಶಾಖೆಗೆ ಉಪ ಮಹಾ ಪ್ರಬಂಧಕ ಬಿ.ಎಂ. ರಾವ ಭೇಟಿ ನೀಡಿ ಗ್ರಾಹಕರೊಂದಿಗೆ ಚರ್ಚಿಸಿದರು.
ನಗರದ ವ್ಯಾಪಾರಸ್ಥರು, ಉದ್ಯಮಿಗಳು, ಸೇರಿದಂತೆ ವಿವಿಧ ಗ್ರಾಹಕರಿಗೆ ಬ್ಯಾಂಕಿನಿಂದ ನೀಡುವ ಕೃಷಿ ಸಾಲ, ಗೃಹಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ಹಾಗೂ ಇತರ ಸೇವೆಗಳ ಕುರಿತು ವಿವರಣೆ ನೀಡಿದರು.
ಗ್ರಾಹಕರು ಬ್ಯಾಂಕಿನ ಈ ಸೌಲಭ್ಯಗಳ ಲಾಭವನ್ನು ಪಡೆಯಬೇಕೆಂದು ಕರೆ ನೀಡಿದ ಅವರು, ಶೀಘ್ರದಲ್ಲೇ ಕೆನರಾ ಬ್ಯಾಂಕ್ನ ಎಟಿಎಂ ಸೌಲಭ್ಯ ಪ್ರಾರಂಭಿಲಾಗುತ್ತಿದೆ ಎಂದು ಹೇಳಿದರು. ಗ್ರಾಹಕರ ಪರವಾಗಿ ಉದ್ಯಮಿ ಸಂತೋಷಕುಮಾರ್ ಇಂಗಿನಶೆಟ್ಟಿ ಮಾತನಾಡಿದರು. ಭೀಮರಾವ ಮೇಟಿ, ಗುರುರಾಜ ಇಂಗಿನಶೆಟ್ಟಿ, ಶರಣು ಬಿರಾಳ, ಎಸ್.ವಿ. ಕಟ್ಟಿ, ಬಾಬುರಾವ ಪಂಚಾಳ, ಶರಣು ಜೆಟಗಿ, ಅಶೋಕ ಇಂಗಿನಶೆಟ್ಟಿ, ಪೀರಪಾಶಾ ಇತರ ಗ್ರಾಹಕರು ಪಾಲ್ಗೊಂಡಿದ್ದರು.
ಬ್ಯಾಂಕಿನ ಅಧಿಕಾರಿಗಳಾದ ಯೋಗೇಶ ಎಸ್. ರಾವ, ಬಸವರಾಜ, ಸಿದ್ರಾಮ ಸರಡಗಿ, ತಬರೇಜ್, ಕೀರ್ತಿ, ರಾಜಶ್ರೀ, ಸಿಬ್ಬಂದಿ ಸಾಹೇಬಣ್ಣ, ಸಾಗರ ಉಪಸ್ಥಿತರಿದ್ದರು.