ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜ.3ರಿಂದ ಜ್ಞಾನಸತ್ರ

Rashmi Kasaragodu
Updated On : 13 Dec 2013, 11:24 am

ರಾಯಚೂರು: ನಗರದ ಸತ್ಯನಾಥ ಕಾಲನಿಯ ಸತ್ಯನಾಥ ಭಜನಾ ಮಂಡಳಿ17ನೇ ವರ್ಷದ ಜ್ಞಾನಸತ್ರ ಕಾರ್ಯಕ್ರಮ ಜ.3ರಿಂದ 9ರವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜ.3 ರಂದು ಉಡುಪಿಯ ಅದಮಾರು ಮಠದ ವಿಶ್ವಪ್ರಿಯತೀರ್ಥರು ಹಾಗೂ ಮಂತ್ರಾಲಯ ಮಠದ ಸುಬುಧೇಂದ್ರತೀರ್ಥರು ನೆರವೇರಿಸಲಿದ್ದಾರೆ. ಮುಂಬಯಿಯ ರಘೂತ್ತಮಾಚಾರ್ಯ ಮೊಕಾಶಿ, ಕೊಯಿಮತ್ತೂರಿನ ನರಸಿಂಹಾಚಾರ್ಯ ಗೋಠೆ, ಹುಬ್ಬಳ್ಳಿಯ ಪ್ರದ್ಯುಮ್ನಾಚಾರ್ಯ ಜೋಷಿ, ನಗರದ ಪ್ರಹ್ಲಾದಾಚಾರ್ಯ ಗಲಗಲಿ, ಶ್ರೀಹರಿ ಆಚಾರ್ಯ ಹಾಗೂ ಧಾರವಾಡದ ವೆಂಕಟ ನರಸಿಂಹಾಚಾರ್ಯ ಗುಡೇಬಲ್ಲೂರು ಅವರಿಂದ ಉಪನ್ಯಾಸ ಆಯೋಜಿಸಲಾಗಿದೆ.
ಜ.5 ರಂದು ಆಯೋಜಿಸಿರುವ ಸಮಾರಂಭದಲ್ಲಿ ನಗರದ ಖ್ಯಾತ ಕೀಲು ತಜ್ಞ ಡಾ.ಅನಿರುದ್ಧ ಕುಲಕರ್ಣಿ ನ್ಯಾಯವಾದಿ ವಿ. ಶ್ರೀಪಾದ್, ಉದ್ಯಮಿ ರಾಘವೇಂದ್ರರಾವ್ ಹಾಗೂ ಕೋಟೆ ಗುರುರಾಜ ಭಜನಾ ಮಂಡಳಿಯ ಪ್ರಮುಖ ಬಿ. ನರಸಿಂಗರಾವ್ ಅವರನ್ನು ಸನ್ಮಾನಿಸಲಾಗುತ್ತದೆ. ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಮಂತ್ರಾಲಯ ಮಠದ ಕಿರಿಯ ಶ್ರೀ ಸುಬುಧೇಂದ್ರತೀರ್ಥವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಭಾಗವಹಿಸಲಿದ್ದಾರೆ.
ಜ್ಞಾನಸತ್ರ ಕಾರ್ಯಕ್ರಮದ ಅಂಗವಾಗಿ ಜ.5 ರಂದು ಬೆಳಗ್ಗೆ 5.30ಕ್ಕೆ ನಗರದ ಎಲ್ಲ ಭಜನಾ ಮಂಡಳಿಗಳು ಹರಿಕಥಾಮೃತಸಾರ ಪಾರಾಯಣ ನಡೆಸಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement