ತರಬೇತಿದಾರರ ಕಾರ್ಯಾಗಾರಕ್ಕೆ ಚಾಲನೆ
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ಈಚೆಗೆ ಜಿಲ್ಲಾ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯಿಂದ ಮುಖ್ಯ ತರಬೇತಿದಾರರ ಕಾರ್ಯಾಗಾರ ಆಯೋಜಿಸಲಾಗಿತ್ತು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್. ಇಂದಿರಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಕ್ರಿಯಾತ್ಮಕ ಸ್ವಯಂಸೇವಕರನ್ನು ಗುರುತಿಸಿ ಬೋಧನಾ ಮಾರ್ಗ ತಿಳಿಸಿ, ಕಲಿಕಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವಂತೆ ಸಲಹೆ ನೀಡಿದರು. ತಾಪಂ ಸದಸ್ಯ ಶಶಿಧರ್ ಪಾಟೀಲ್, ತಾಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಪ್ಯಾಟಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿ ಅಂಬುಜಾ ನಾಯಕ ಸೇರಿ ಅನೇಕರಿದ್ದರು. ಪ್ರೇರಕರು, ತಾಲೂಕು ಸಂಯೋಜಕರು ಸೇರಿ ಲೋಕ ಶಿಕ್ಷಣ ಸಮಿತಿಯ ಸಿಬ್ಬಂದಿ ಪಾಲ್ಗೊಂಡಿದ್ದರು.