ಮಾರುತಿ ನಗರ: ಹತ್ತಿ ಕ್ಷೇತ್ರೋತ್ಸವ
ಸಿಂಧನೂರು: ತಾಲೂಕಿನ ಜವಳಗೇರಾ ಮತ್ತು ಮಾರುತಿ ನಗರದ ಹತ್ತಿರ ಇರುವ ನರಸಪ್ಪ ಭೋವಿ ಎನ್ನುವರ ಹೊಲದಲ್ಲಿ ಬುಧವಾರ ಬಿಟಿ ಹತ್ತಿ ಬೆಳೆಯ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು. ಕೆ.ಪಿ.ಆರ್. ಫರ್ಟಿಲೈಜರ್ಸ್, ಸಾಯಿ ಸ್ವರೂಪ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ವತಿಯ ಅಭಯ ಬಿಟಿ-2 ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕಂಪನಿಯ ಮಾರ್ಕೆಟಿಂಗ್ ಅಧಿಕಾರಿಗಳು, ರೈತರು ಮತ್ತು ಮಾರಾಟಗಾರರು ಭಾಗವಹಿಸಿದ್ದರು. ಆರ್ಎಸ್ಕೆ ಪುಟ್ಟಣ್ಣ ನಿರೂಪಿಸಿದರು.