ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯದು ವಂಶದ ಕೊಡುಗೆ ಅಪಾರ

Rashmi Kasaragodu
Updated On : 13 Dec 2013, 11:27 am

ಶಹಾಪುರ: ಕನ್ನಡದ ನೆಲ, ಜಲ, ಸಾಂಸ್ಕೃತಿಗೆ ಯದು ಕುಲದ ಕೊಡುಗೆ ಅಪಾರ. ಸಾಮಾಜಿಕ ಪರಿವರ್ತನೆಗೆ ಅವರು ನೀಡಿದ ಕೊಡುಗೆ ಈಗಿನ ಸರ್ಕಾರಗಳು ಸಹ ನೀಡಲಾಗುತ್ತಿಲ್ಲ ಎಂದು ಉಪನ್ಯಾಸಕ ಭೀಮಣ್ಣ ಅಂಚೆಸೂಗುರ ಹೇಳಿದರು.
ಪಟ್ಟಣದ ಸಮಾನ ಮನಸ್ಕರ ಗೆಳೆಯರ ಬಳಗದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ದೇವೆಂದ್ರ ಹೆಗ್ಗಡೆ ಪಂಚಮ ಶಾಲೆ ಮಾತನಾಡಿ, ವಿಶ್ವವಿದ್ಯಾಲಯ, ಕೈಗಾರಿಕ ಮೀಸಲಾತಿ, ಜನಪ್ರತಿನಿಧಿ ಸಭೆ, ನಾನಾ ಸಾಮಾಜಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದ್ದ ಏಕೈಕ ಭಾರತೀಯ ರಾಜವಂಶವಿದು ಎಂದರು. ಒಡೆಯರ ನಿಧನದಿಂದಾಗಿ ಬಹುದೊಡ್ಡ ಸಾಹಿತ್ಯ ಬಡವಾಗಿದೆ ಎಂದು ಸಭೆಯಲ್ಲಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿ, ಶೋಕ ಆಚರಿಸಿದರು. ರಾಘವೇಂದ್ರ ಹಾರಣಗೇರಾ, ಮಾನಪ್ಪ ಶಿರವಾಳ, ಆರ್. ಚನ್ನಬಸ್ಸು, ಬಸವರಾಜ ಸಿನ್ನೂರ, ವಿಶ್ವರಾದ್ಯ ಸತ್ಯಂಪೇಟೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement