ರು. 10.28 ಲಕ್ಷ ಉಳಿತಾಯ ಬಜೆಟ್ ಮಂಡನೆ
ದೇವದುರ್ಗ: ಸ್ಥಳೀಯ ಪುರಸಭೆಯ ವಿಶೇಷ ಸಭೆ ಗುರುವಾರ ನಡೆದು, 2013-14ನೇ ಸಾಲಿಗೆ ಪುರಸಭೆ ಅಧ್ಯಕ್ಷ ಫಕ್ರುದ್ದೀನ್ ಸಾಬ್ ಗೌರಂಪೇಟ್ 10.28 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ತಾಲೂಕಿನ ಹೂವಿನಹೆಡ್ಗಿ ಗ್ರಾಮದ ಹೊರವಲಯದಲ್ಲಿನ ಪಂಪ್ಹೌಸ್ ಬಳಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಬಜೆಟ್ ಮಂಡಿಸಿದ ಅವರು ಒಟ್ಟು 2123.55 ಲಕ್ಷ ವಿವಿಧ ಅಭಿವೃದ್ಧಿ ಕಾಮಗಾರಿಗೆ 2113.27 ಲಕ್ಷ ವಿನಿಯೋಗಿಸುವ ಗುರಿಯಿರಿಸಿಕೊಳ್ಳುವ ಮೂಲಕ ಉಳಿತಾಯದ ಬಜೆಟ್ ಪ್ರಕಟಿಸಿದರು.
ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಪಟ್ಟಣದಲ್ಲಿ ಕುಡಿವ ನೀರು, ಚರಂಡಿ, ವಿದ್ಯುತ್ ದೀಪ, ಸ್ವಚ್ಛತೆ ಕಾಪಾಡಲು, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಬಜೆಟ್ನಲ್ಲಿ ನೀಡಿರುವ ಅವರು, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕಾಮಗಾರಿಗಳ ಜಾರಿಗೆ ತರಲು ಉದ್ದೇಶಿಸಿರುವುದಾಗಿ ಸ್ಪಷ್ಟಪಡಿಸಿದರು.