ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರೇಲ್ವೆ ಕಾಮಗಾರಿಗೆ ನಾಳೆ ಖರ್ಗೆ ಅಡಿಗಲ್ಲು

Rashmi Kasaragodu
Updated On : 13 Dec 2013, 11:24 am

ರಾಯಚೂರು: ತಾಲೂಕಿನ ಮಟಮಾರಿ- ಮಂತ್ರಾಲಯಂ ರೋಡ್ ರೈಲು ನಿಲ್ದಾಣದ ಮಧ್ಯೆ ಬ್ರಾಡ್ಗೇಜ್ ಜೋಡು ಮಾರ್ಗ ಅಳವಡಿಕೆ ಮತ್ತು ತುಂಗಭದ್ರಾ ನದಿ ಮೇಲಿನ ಹಾಲಿ ಸೇತುವೆಯ ವಿಸ್ತರಣೆ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಡಿ.14ರಂದು ಆಯೋಜಿಸಲಾಗಿದೆ.
 ಅಂದು ಬೆಳಗ್ಗೆ 11.30ಕ್ಕೆ ಮಟಮಾರಿ ಗ್ರಾಮದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಎರಡೂ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಿದ್ದು, ಮಟಮಾರಿ ಗ್ರಾಮದ ರೇಲ್ವೆ ನಿಲ್ದಾಣದ ಬಳಿ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಂಸದರಾದ ಸಣ್ಣಪಕೀರಪ್ಪ, ಶಿವರಾಮೇಗೌಡ ಸೇರಿದಂತೆ ರೇಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement