ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಪ್ತಶತಿ ಪಾರಾಯಣ, ಚಂಡಿಹೋಮ ಸಂಪನ್ನ

Rashmi Kasaragodu
Updated On : 13 Dec 2013, 11:28 am

ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ದಕ್ಷಿಣಾಮುಖಿ ಎಲ್ಲಾಂಬಿಕಾ ದೇವಿಯ ನೂತನ ದೇವಸ್ಥಾನ ನವೀಕರಣ ಕಾರ್ಯ ಪ್ರಾರಂಭೋತ್ಸವ ನಿಮಿತ್ತ ಸೋಮವಾರದಿಂದ ಎರಡು ದಿನ ಸಪ್ತಶತಿ ಪಾರಾಯಣ, ನವ ಚಂಡಿಕಾ ಹೋಮ ನಡೆದು ಮಂಗಳವಾರ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
ಸೋಮವಾರ ದೇವಿಗೆ ಅಭಿಷೇಕ, ಗಣೇಶ ಪೂಜೆ, ಪ್ರಧಾನ ಸಂಕಲ್ಪ, ಪುಣ್ಯಾವಾಚನ, ನಾಂದಿ ಸ್ಥಾಪನೆ, ದುರ್ಗಾಸಪ್ತ ಶತಿ ಪಾರಾಯಣ, ಶ್ರೀಸೂಕ್ತ, ನಾರಾಯಣ ಸೂಕ್ತ ಪಾರಾಯಣ, ಮುಖ್ಯ ಕಲಶ ಸ್ಥಾಪನೆ, ಮಹಾಮಂಗಳಾರತಿ ನಡೆಯಿತು. ಸಂಜೆ ಉದಕಶಾಂತಿ ಮಂತ್ರ ಪಠಣ, ಕುಂಕುಮಾರ್ಚನೆ, ಅಷ್ಟಾವಧಾನ ಪೂಜೆ, ಮಹಾಮಂಗಳಾರತಿ ನಡೆಯಿತು.
ಮಂಗಳವಾರ ಬೆಳಗ್ಗೆ ದೇವಿಗೆ ಶ್ರೀಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತ ಅಭಿಷೇಕ, ಕುಂಕುಮಾರ್ಚನೆ, ನವಗ್ರಹಯುಕ್ತ ಚಂಡಿಕಾಹೋಮ, ಪೂರ್ಣಾಹುತಿ ನಡೆಯಿತು.
ಸುಕ್ಷೇತ್ರ ಗಾಣಗಾಪುರದ ಗೋಪಾಲಭಟ್ಟ ಉಪಾಧ್ಯಾಯರ ನೇತೃತ್ವದಲ್ಲಿ ಋತ್ವಿಜರಾದ ರಾಜೇಂದ್ರ ಭಟ್ಟ, ಶಿವರಾಮ ಭಟ್ಟ ಪೂಜಾರಿ, ದಿಗಂಬರ ಕಠಮಕರ್, ಅತ್ರಿ ಘತ್ತರಗಿ, ಕುಮಾರ್ ಮಡ್ನಳ್ಳಿ, ರಮಾನಂದ ಪಾಟೀಲ್, ಮಾರ್ಥಂಡ ಪಾಟೀಲ್, ಹೋಮ ಹವನ ನಡೆಯಿತು.
 ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಾದ ಹಂಚಾಟೆ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ವೀರಣ್ಣಗೌಡ ಪರಸರೆಡ್ಡಿ, ಜಂಗಮ ಸಮಾಜದ ಅಧ್ಯಕ್ಷ ನೀಲಯ್ಯ ಸ್ವಾಮಿ, ಶ್ರೀಮಂತ ಗುಲ್ಬರ್ಗ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಬಸವರಾಜಗೌಡ ಮಾಲಿಪಾಟೀಲ್, ವೀರಾರೆಡ್ಡಿ, ಬಾಬುರಾವ, ಭೀಮಸೇನರಾವ ಕುಲ್ಕರ್ಣಿ, ಮಲ್ಲಪ್ಪ ಸಜ್ಜನ, ದಂಡಯ್ಯ ಸ್ವಾಮಿ, ಈಶ್ವರ ಹಾಬಾಳ, ಈರಣ್ಣಗೌಡ ತೋಟದ, ಬಸವರಾಜ ಮಹಾರಾಜ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪ್ರಸಾದ ವಿತರಣೆ ನಡೆಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement