ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ
ಸಿಂಧನೂರು: ಹಿಂದಿನ ತಲೆಮಾರಿನ ಜನರು ತುಂಬು ಕುಟುಂಬದಲ್ಲಿ ಒಗ್ಗಟ್ಟಿನಿಂದ ಹಿರಿಯರ ಮಾರ್ಗದರ್ಶನದಂತೆ ಜೀವಿಸುತ್ತಿದ್ದರು. ವಿವಿಧ ಸಂಬಂಧಗಳೊಂದಿಗೆ ಒಂದೇ ಸೂರಿನಡೆ ಒಗ್ಗಟ್ಟಾಗಿ ಬಾಳುತ್ತಿದ್ದರು. ಅವರಿಗೆ ಒಗ್ಗಟ್ಟೇ ಜೀವಾಳವಾಗಿತ್ತು ಎಂದು ಕಸಾಪ ಮಾಜಿ ಅಧ್ಯಕ್ಷ ವೆಂಕನಗೌಡ ವಟಗಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಪುನವಸತಿ ಕೇಂದ್ರ ಅರಗಿನಮರ ಕ್ಯಾಂಪ್ನಲ್ಲಿ ಹಮ್ಮಿಕೊಂಡಿರುವ 2013-14ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ “d«Ú®Ú¥Ú ಸಾಹಿತ್ಯದಲ್ಲಿ ಜೀವನ ÈÚáèÄÀVÚ×Úß’ ವಿಷಯದ ಕುರಿತು ಮಾತನಾಡಿದರು. ಇಂದಿನ ದಿನಗಳಲ್ಲಿ ಮಾಧ್ಯಮ, ಮೊಬೈಲ್, ಸಿನಿಮಾ, ಪಾಶ್ಚಾತ್ಯೀಕರಣಗಳ ಪ್ರಭಾವದಿಂದ ಸಂಸ್ಕಾರಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದಿಸಿದರು. ವಿ.ಸಿ. ಪಾಟೀಲ್ ಚುಟುಕು, ಶಾಹರಿ, ನಗೆಹನಿಗಳನ್ನು ಹೇಳಿ ನೆರೆದಿದ್ದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ನೀರುಬಳಕೆದಾರರ ಸಂಘದ ಕಾರ್ಯದರ್ಶಿ ವಿಶ್ವನಾಥ ಬಾಲಕಿಯರ ಸ.ಪ.ಪೂ.ಕಾ. ಪ್ರಾಚಾರ್ಯ ಶರಣಪ್ಪ ನೆಟೆಕಲ್, ಶಿಕ್ಷಕ ನಾಗರಾಜ ಮಾಂಡ್ರೆ, ಗೋಪಾಲಕೃಷ್ಣ, ರಾಮಸುಬ್ಬರೆಡ್ಡಿ, ನಾರಾಯಣರೆಡ್ಡಿ ಭಾಗವಹಿಸಿದ್ದರು. ವಿರುಪನಗೌಡ ಅಧ್ಯಕ್ಷತೆ ವಹಿಸಿದ್ದರು. ಕದಂಬರು ತಂಡದ ಶಿವಣ್ಣ ಪ್ರಾರ್ಥಿಸಿ, ವೀರೇಶ ದೇವರಮನೆ ನಿರೂಪಿಸಿ, ನಿಂಗಪ್ಪ ಸ್ವಾಗತಿಸಿ, ವೀರಭದ್ರ ವಂದಿಸಿದರು. ಪ್ರಾಚಾರ್ಯ ಶರಣಯ್ಯ ಕೆ.ಎಮ್, ರಾ.ಸೇ.ಯೋ ಅಧಿಕಾರಿಗಳಾದ ಜಗದೀಶ ಓತೂರು, ಸತ್ಯನಾರಾಯಣ ಉಪಸ್ಥಿತರಿದ್ದರು.