ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಳೆ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಿಕೆ: ಬಿಬಿಎಂ ಪರೀಕ್ಷೆ ರದ್ದು

Rashmi Kasaragodu
Updated On : 13 Dec 2013, 11:27 am

ರಾಯಚೂರು: ಗುಲ್ಬರ್ಗ ವಿವಿಯ ಬಿಬಿಎಂ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಕ್ರಮದಂತೆ ಪ್ರಶ್ನೆ ಪತ್ರಿಕೆ ತಯಾರಿಸಿ ಒದಗಿಸಿದ್ದರಿಂದ ವಿದ್ಯಾರ್ಥಿಗಳು ತೀವ್ರ ವಿರೋಧಿಸಿದ್ದು, ಅದರಿಂದ ಗೊಂದಲಕ್ಕೆ ಸಿಲುಕಿದ ವಿವಿ ಆಡಳಿತ ಗುರುವಾರ ಪರೀಕ್ಷೆ ರದ್ದುಗೊಳಿಸಿದ ಪ್ರಸಂಗ ನಡೆದಿದೆ.
ನಗರ ಸೇರಿದಂತೆ ವಿವಿಧೆಡೆ ಗುಲ್ಬರ್ಗಾ ವಿವಿಯ ಬಿಬಿಎಂ ಮೊದಲ ಸೆಮಿಸ್ಟರ್ ಐಚ್ಛಿಕ ಕನ್ನಡ ವಿಷಯದ ಪರೀಕ್ಷೆಯಿತ್ತು. ವಿವಿ ಆಡಳಿತವು ಪ್ರಸಕ್ತ ಕನ್ನಡ ಪಠ್ಯದ ಬದಲಿಗೆ ಈ ಹಿಂದೆ ಜಾರಿಯಲ್ಲಿದ್ದ ಹಳೆಯ ಕನ್ನಡ ವಿಷಯ ಆಧರಿಸಿ ತಯಾರಿಸಿದ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ಒದಗಿಸಿತು. ಪರೀಕ್ಷೆ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಿ ಆಕ್ಷೇಪಿಸಿದರು. ಪ್ರಶ್ನೆಪತ್ರಿಕೆಯನ್ನು ಕಂಡ ವಿದ್ಯಾರ್ಥಿಗಳು ಗಾಬರಿಗೊಂಡು ಪರೀಕ್ಷೆ ವಿಭಾಗದ ಮೇಲಧಿಕಾರಿಗಳಿಗೆ ದೂರಿ ಪರೀಕ್ಷೆ ರದ್ದತಿಗೆ ಒತ್ತಾಯಿಸಿದರು. ಗುಲ್ಬರ್ಗ ವಿವಿಗೆ ಸುದ್ದಿ ಮುಟ್ಟಿಸಿದ ಕಾಲೇಜುಗಳ ಪ್ರಮುಖರು ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಜಿಲ್ಲೆಯಲ್ಲಿ 15 ಬಿಬಿಎಂ ಕಾಲೇಜುಗಳಿದ್ದು, ಅವುಗಳಲ್ಲಿ ವ್ಯಾಸಂಗ ಮಾಡಿದ್ದ  ವಿದ್ಯಾರ್ಥಿಗಳು ಜಿಲ್ಲೆಯ ವಿವಿಧೆಡೆಯಿಂದ ನಗರದ ನಾಲ್ಕು ಪರೀಕ್ಷೆ ಕೇಂದ್ರಗಳಿಗೆ ಆಗಮಿಸಿದ್ದು, ಪ್ರಶ್ನೆಪತ್ರಿಕೆ  ಅವಾಂತರದಿಂದಾಗಿ ಪರೀಕ್ಷೆ ಬರೆಯದೇ ಮರಳುವಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement